ಅಂತರರಾಷ್ಟ್ರೀಯ

ಕೀವ್‌ಗೆ ಮರಳಿದ ಸ್ಲೊವೇನಿಯನ್ ರಾಜತಾಂತ್ರಿಕರು

ಕೀವ್‌ಗೆ ಮರಳಿದ ಸ್ಲೊವೇನಿಯನ್ ರಾಜತಾಂತ್ರಿಕರು

ಲುಬ್ಜಾನಾ: ಮಾರ್ಚ್ 21 : ಸ್ಲೊವೇನಿಯಾದ ಪ್ರಧಾನಿ ಜಾನೆಜ್ ಜಾನ್ಸಾ ಅವರು ತಮ್ಮ ರಾಷ್ಟ್ರದ ರಾಯಭಾರಿ ಮತ್ತೆ ಉಕ್ರೇನ್‌ ರಾಜಧಾನಿ ಕೀವ್‌ಗೆ ಹಿಂದಿರುಗಲಿದ್ದಾರೆ ಎಂದು ಘೋಷಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು  ಸ್ಲೊವೇನಿಯಾದ ರಾಯಭಾರಿ ಮತ್ತು  ಸಿಬ್ಬಂದಿ ಪ್ರತಿಕೂಲ ಪರಿಸ್ಥಿತಿ ಕಾರಣ ಕೀವ್‌ನಲ್ಲಿದ್ದ ಕಚೇರಿ ತೆರವು ಮಾಡಿದ್ದರು. ಈಗ ಮತ್ತೆ ಅವರು ಕೀವ್‌ಗೆ ಹಿಂದಿರುಗುತ್ತಾರೆ. ಉಕ್ರೇನ್‌ಗೆ ರಾಜತಾಂತ್ರಿಕ ಬೆಂಬಲದ ಅಗತ್ಯವಿದೆ ಎಂದು ಅವರು ವಿವರಿಸಿದ್ದಾರೆ. ಹಿಂದಿರುಗಿದ ರಾಜತಾಂತ್ರಿಕರು ಸ್ವಯಂಸೇವಕರು ಎಂದು ಜಾನ್ಸಾ ಹೇಳಿದ್ದಾರೆ.

ಮಾರ್ಚ್ 15 ರಂದು, ಝೆಕ್ ಪ್ರಧಾನಿ ಪೆಟ್ರ್ ಫಿಯಾಲಾ ಮತ್ತು ಪೋಲಿಷ್ ಪ್ರಧಾನ ಮಂತ್ರಿ ಮಾಟಿಯುಸ್ಜ್ ಮೊರಾವಿಕಿ ಅವರೊಂದಿಗೆ ಜಾನ್ಸಾ ಅವರು ಕೀವ್‌ಗೆ ಭೇಟಿ ನೀಡಿದ್ದರು.  ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಸಭೆಯ ನಂತರ  ಈ ನಾಯಕರು  ಮೊದಲ ಬಾರಿಗೆ  ಉಕ್ರೇನಿಯನ್ನರು “ಒಂಟಿಯಾಗಿಲ್ಲ” ಎಂದು ಹೇಳಿದರು.  ಉಕ್ರೇನ್ ರೈಲಿನಲ್ಲಿ ದೀರ್ಘ, ಅಪಾಯಕಾರಿ ಪ್ರಯಾಣವನ್ನು ಮಾಡಿದ ಮೂರು ಯುರೋಪಿಯನ್ ನಾಯಕರ ಧೈರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.  ಪೋಲೆಂಡ್‌ನಿಂದ ಕೀವ್‌ಗೆ ಬೆಂಬಲದ ಪ್ರದರ್ಶನದ ನಂತರ ನಗರವು ಮತ್ತಷ್ಟು ರಷ್ಯಾದ ದಾಳಿಗೆ ಒಳಗಾಯಿತು.

ಕೀವ್‌ನಲ್ಲಿ ಕರ್ಫ್ಯೂ ಪ್ರಾರಂಭವಾದ ಸಂದರ್ಭ ಪೋಲೆಂಡ್, ಸ್ಲೊವೇನಿಯಾ ಮತ್ತು ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು  ಭೇಟಿಯಾಗಿದ್ದರು. ಈ ನಂತರ, ಜೆಕ್ ನಾಯಕ, ಉಕ್ರೇನಿಯನ್ನರಿಗೆ ಅವರು “ಒಂಟಿಯಾಗಿಲ್ಲ” ಎಂದು ಹೇಳಿದರು. ಇವರು ರಷ್ಯಾ ಆಕ್ರಮಣದ ನಂತರ ಉಕ್ರೇನ್‌ಗೆ ಭೇಟಿ ನೀಡಿದ ಮೊದಲ ಪಾಶ್ಚಾತ್ಯ ನಾಯಕರು

ಸುದ್ದಿ ಓದಿ