ಸಿದ್ಧಲಿಂಗ ಸುಬೇದಾರ ಅವಿರೋಧ ಆಯ್ಕೆ
Siddhalinga Subedar elected unopposed
ಆಲಮೇಲ 14: ತಾಲೂಕಿನ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಸಿದ್ಧಲಿಂಗ ಸುಬೇದಾರ ಅವಿರೋಧ ಆಯ್ಕೆಗೊಂಡಿದ್ದಾರೆ.
ಶನಿವಾರ ಪಟ್ಟಣ್ಣದ ಅಳ್ಳೊಳ್ಳಿಮಠದಲ್ಲಿ ಆಲಮೇಲ ತಾಲೂಕಿನ ಬಣಜಿಗ ಸಮಾಜದ ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಪದಾದಿಕಾರಿಗಳ ಸಮ್ಮುಖದಲ್ಲಿ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಜರುಗಿತು.ನೂತನ ತಾಲೂಕು ಅಧ್ಯಕ್ಷರಾಗಿ ಸಿದ್ದಲಿಂಗ ಸುಬೇದಾರ, ಗೌರವ ಅಧ್ಯಕ್ಷರಾಗಿ ದೇವಣಗಾಂವ ಗ್ರಾಮದ ಶರಣ್ಣಪ್ಪ ಗುಬ್ಬೆವಾಡ, ತಾಲೂಕು ಯುವ ಘಟಕದ ಅದ್ಯಕ್ಷರಾಗಿ ವಿಶ್ವನಾಥ ಕೊರಹಳ್ಳಿ ಇವರನ್ನು ಅವಿರೋಧ ಆಯ್ಕೆಗೊಂಡಿದ್ದಾರೆ. ಹಾಗೂ ಜಿಲ್ಲಾ ಉಪಾಧ್ಯಕ್ಷರಗಿ ರವಿಂದ್ರ ವಾರದ ಅವರನ್ನು ರಾಜ್ಯ ಮತ್ತು ಜಿಲ್ಲಾ ಬಣಜಿಗ ಸಮಾಜದ ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿದರಿ, ಜಿಲ್ಲಾ ಪದಾಧಿಕಾರಿಗಳಾದ ಮುತ್ತು ಕಿಣಗಿ, ರಮೇಶ ಸಾಲಕ್ಕಿ, ತಾಲೂಕಿನ ಹಿರಿಯರಾದ ಶಿವುಕುಮಾರ ಗುಂದಗಿ, ಭಸವರಾಜ ಧನಶ್ರೀ, ತಾರಾಪೂರದ ಮಲ್ಲಿಕಾರ್ಜುನ ಜೋಗೂರು, ಬಸವರಾಜ ಗುಣಾರಿ, ನೀಲಕಂಠ ಜೋಗೂರ, ವಿಶ್ವನಾಥ ಮಹಾಜನ, ದೇವಣಗಾಂವ ಗ್ರಾಮದ ಶಿಕ್ಷಕ ಶಿವಾನಂದ ಕಲಬುರಗಿ, ರಮೇಶ ಸೊಡ್ಡಿ, ಡಾ. ಪ್ರಮೋದ ಮಹಾಜನ, ಶಿವಶರಣ ಗುಂದಗಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮದ ಬಣಜಿಕ ಸಮಾಜದವರು ಸಭೆಯಲ್ಲಿ ಪಾಲ್ಕೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 