ರಾಜಕೀಯ ಹಿರಿತನದಲ್ಲಿ ಶಿವಣ್ಣವರ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು- ಹನುಮಂತಪ್ಪ ದೇವರಗುಡ್ಡ

ರಾಜಕೀಯ ಹಿರಿತನದಲ್ಲಿ ಶಿವಣ್ಣವರ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು- ಹನುಮಂತಪ್ಪ ದೇವರಗುಡ್ಡ  Shivannavara should be given a ministerial position due to his political seniority - Hanumanthappa D

ರಾಜಕೀಯ ಹಿರಿತನದಲ್ಲಿ ಶಿವಣ್ಣವರ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು- ಹನುಮಂತಪ್ಪ ದೇವರಗುಡ್ಡ  

ರಾಣೆಬೆನ್ನೂರು :30 ಕೊಟ್ಟ ಮಾತು, ಇಟ್ಟ ಹೆಜ್ಜೆ, ಬಿಟ್ಟ ಬಾಣ ಎಂದಿಗೂ ತಪ್ಪುವುದಿಲ್ಲ ಎನ್ನುವ ಶರಣರ ವಾಣಿಯಂತೆ ಕುರುಬ ಸಮುದಾಯ ಹಾಲಿನಷ್ಟೇ ಪವಿತ್ರರು., ಅಧಿಕಾರದ ಆಸೆಗಾಗಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಎಂದೆಂದಿಗೂ ಹಪ-ಹಪಿತನ  ಮಾಡಿದವರಲ್ಲ ಅಂಥವರನ್ನು,  ಅವರ ಸೇವಾ  ರಾಜಕೀಯ ಶ್ರೇಷ್ಠತೆಯನ್ನು ಪರಿಗಣಿಸಿ, ಜಿಲ್ಲೆಗೆ ಮಂತ್ರಿ ಸ್ಥಾನವನ್ನು   ನೀಡಬೇಕು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹನುಮಂತಪ್ಪ ದೇವರಗುಡ್ಡ ಅವರು ಸರ್ಕಾರಕ್ಕೆ ಆಗ್ರಹಿಸಿದರು. ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರಿ​‍್ಡಸಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು ಬಹುದೊಡ್ಡ ಸಮಾಜದ ಏಕೈಕ ಮುಖಂಡ ಅಷ್ಟೇ ಅಲ್ಲ. ಸಮಗ್ರ ನಾಡಿನ ಎಲ್ಲ ಸಮುದಾಯದ ಪ್ರೀತಿ, ವಿಶ್ವಾಸ, ಮತ್ತು ಅಭಿಮಾನ ಗಳಿಸಿದ  ಬಹುದೊಡ್ಡ ಸಮಾಜದ ಏಕೈಕ ನಾಯಕ ಸಿದ್ದರಾಮಯ್ಯನವರು ಅವರಾಗಿದ್ದಾರೆ. ರಾಜಕೀಯ ಮುತ್ಸದ್ದಿ ನಾಯಕ ಐದು ದಶಕಗಳ ಕಾಲ  ತಮ್ಮ ರಾಜಕೀಯ ಬದುಕಿನಲ್ಲಿ ಯಾರಿಗೂ, ಎಂದಿಗೂ ಕೆಟ್ಟದ್ದನ್ನು ಬಯಸಿದವರಲ್ಲ. ನುಡಿದಂತೆ ನಡೆದ ನಾಯಕ  ಸಿದ್ದ ರಾಮಯ್ಯನವರಿಗೆ, ಸಿದ್ದರಾಮಯ್ಯನವರೇ ಸಾಟಿ. ಎಂದ ದೇವರಗುಡ್ಡ ಅವರು ರಾಜ್ಯಕ್ಕೆ ನೀಡಿದ ಅಮೋಘ ಮತ್ತು ಅಪ್ರತಿಮ  ರಾಜಕೀಯ ಸೇವೆಗೆ ತಮ್ಮ ಅಭಿಮಾನ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು. ಸಮಾಜದ ಇನ್ನೋರ್ವ ಮುಖಂಡ, ಯುವ ನ್ಯಾಯವಾದಿ,ಜಿಲ್ಲೆಯಲ್ಲಿ ಅದೇ ಮಾದರಿಯಲ್ಲಿ ತಮ್ಮ ರಾಜಕೀಯದ ಮೂಲಕ ಅತ್ಯಂತ ಸರಳತೆ ಮೈಗೂಡಿಸಿಕೊಂಡು ಜನಸಾಮಾನ್ಯರಲ್ಲಿ, ಸಾಮಾನ್ಯರಾಗಿ, ಕೆಳಹಂತದಲ್ಲಿ ಬೆಳೆದು , ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ನಾಯಕ ಶಿವಣ್ಣನವರ, ಅವರಾಗಿದ್ದಾರೆ. ಅವರ ರಾಜಕೀಯ  ಜೇಷ್ಠತೆ ಮತ್ತು ಸೇವಾ ಹಿರಿತನಕ್ಕೆ ಈ ಬಾರಿ ಜಿಲ್ಲೆಗೆ ಮಂತ್ರಿ ಸ್ಥಾನವನ್ನು ಕೊಡಲೇಬೇಕು ಅದು ಕಾಂಗ್ರೆಸ್ ಪಕ್ಷದ, ಮತ್ತು ಹೈಕಮಾಂಡ್ ರಾಜ್ಯ ಆಡಳಿತದ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.  ಬಸವರಾಜ ಶಿವಣ್ಣನವರ. ಅಧಿಕಾರಕ್ಕಾಗಿ ಎಂದಿಗೂ ಬೆನ್ನು ಹತ್ತಿದವರಲ್ಲ. ಬೆನ್ನು ಹತ್ತುವ ಜಾಯಮಾನದವರು ಅವರಲ್ಲ. ಅಂಥವರನ್ನು ಭವಿಷ್ಯದ ಮುಖ್ಯಮಂತ್ರಿಗಳು ಗುರುತಿಸಿ ಗೌರವಿಸಿ ಅವರಿಗೆ ಮಂತ್ರಿ ಸ್ಥಾನವನ್ನು  ನೀಡಬೇಕು ಎಂದು ಮನವಿ ಮಾಡಿದರು.ಮಾಧ್ಯಮಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಾಲತೇಶ್ ಹೊಳೆಮ್ಮನವರ, ನೀಲಪ್ಪ ದೇವರಗುಡ್ಡ, ಸುಭಾಷ್ ಕೆಂಗಲ್, ಮಂಜುನಾಥ್ ಬ್ಯಾಡಗಿ, ಮಾಲತೇಶ್ ಹೊಳೆಮ್ಮನವರ, ಮಂಜುನಾಥ್ ಬೂಸಮ್ಮನವರ, ಹನುಮಂತಪ್ಪ  ಹೂಳೆಮ್ಮನವರ, ಮಂಜುನಾಥ್ ಬ್ಯಾಡಗಿ ನಿಂಗಪ್ಪ ಬೆಂಕಿ ರಾಹುಲ್ ಎಳೇಹೂಳೆ, ಎಲ್ಲಪ್ಪ ದೇವರಗುಡ್ಡ, ಸೇರಿದಂತೆ ವಿವಿಧ ಗ್ರಾಮಗಳ ಸಮಾಗದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.