ಸೌಂದತ್ತಿ

ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ: ಸಂಭ್ರಮದ ವಾತಾವರಣ ನಿರ್ಮಾಣ

ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ: ಸಂಭ್ರಮದ ವಾತಾವರಣ ನಿರ್ಮಾಣ

ಉಗರಗೋಳ 19: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಅ. 20 ಬುಧವಾರದಂದು ಶೀಗಿ ಹುಣ್ಣಿಮೆ ಜರುಗಲಿದ್ದು, ಲಕ್ಷಾಂತರ ಭಕ್ತರ ದಂಡೇ ಶ್ರೀಕ್ಷೇತ್ರದತ್ತ ಹರಿದುಬರುತ್ತಲಿದೆ.  

ಶೀಗಿ ಹುಣ್ಣಿಮೆ ರೈತರ ವಿಶೇಷ ಹಬ್ಬ ಎಂದೇ ಪರಿಗಣಿಸಲ್ಪಡುತ್ತದೆ. ಪ್ರತಿವರ್ಷ ಯಲ್ಲಮ್ಮನಗುಡ್ಡಕ್ಕೆ ರೈತರು ಅಧಿಕ ಪ್ರಮಾಣದಲ್ಲಿ ಆಗಮಿಸಿ, ದೇವಿ ದರ್ಶನ ಪಡೆಯುತ್ತಾರೆ. ಅದರಲ್ಲೂ ಬನದ ಹುಣ್ಣಿಮೆ, ಭರತ ಹುಣ್ಣಿಮೆ ಹಾಗೂ ಶೀಗಿ ಹುಣ್ಣಿಮೆ ವೇಳೆಗೂ ಬರುವವರೇ ಅಧಿಕ.  

ಶೀಗಿ ಹುಣ್ಣಿಮೆ ಅಂಗವಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಬರುವ ರೈತರು ಹಾಗೂ ಭಕ್ತರು, ಉತ್ತಮ ಮಳೆ-ಬೆಳೆಗಾಗಿ ರೇಣುಕಾ ದೇವಿ ಬಳಿ ಪ್ರಾರ್ಥಿಸಿ ಕೃತಾರ್ಥರಾಗಲಿದ್ದಾರೆ. 

ಯಲ್ಲಮ್ಮನ ಸನ್ನಿಧಿಯಲ್ಲಿ ಈಗ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರದಿಂದಲೇ ಗುಡ್ಡದತ್ತ ಭಕ್ತರು ಮುಖಮಾಡಿದ್ದಾರೆ. 

ದೇಶದ ನಾನಾ ರಾಜ್ಯಗಳಿಂದ ಬರುವಂತ ಭಕ್ತರಿಗೆ ಶ್ರೀಕ್ಷೇತ್ರದಲ್ಲಿ ತೊಂದರೆಯಾಗದಂತೆ ಸಕಲ ಸೌಲಭ್ಯ ಕಲ್ಪಿಸಲಾಗಿದ್ದು ಇನ್ನೂ ಹಂತ ಹಂತವಾಗಿ ಹೆಚ್ಚನ ಸೌಲಭ್ಯ ಕಲ್ಪಿಸಲಾಗುವುದು 

ವಿಧಾನಸಭೆ ಉಪಸಭಾಪತಿಗಳು ಹಾಗೂ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷರು ಆನಂದ ಮಾಮನಿ. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಟ್ರಸ್ಟ್‌ ಸಿಬ್ಬಂದಿ, ಅಧಿಕಾರಿಗಳು ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಭಕ್ತಾಧಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೂ ಸಹ ಕೋವಿಡ್‌-19 ಮಾರ್ಗಸೂಚಿಯಂತೆ ದೈಹಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಯಲ್ಲಮ್ಮ ದೇವಿ ದರ್ಶನ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಗುಂಪಾಗಿ ಸೇರಬಾರದು ಭಕ್ತರಿಗೆ ಮೂಲಭೋತ ಸೌಕರ್ಯ ಕಲ್ಪಿಸಲು ಸತತವಾಗಿ ಶ್ರಮಿಸುತ್ತಿದ್ದವೆ. ಎಂದು ಪ್ರಭಾರಿ ಯಲ್ಲಮ್ಮ ದೇವಸ್ಥಾನ ಕಾರ್ಯನಿವಾಹಕ ಅಧಿಕಾರಿ ಬೈಲ್‌ಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು. 

ವಾಹನ ದಟ್ಟಣೆಯಾಗದಂತೆ ಕ್ರಮ: 

ಏಕಕಾಲಕ್ಕೆ ಸಹಸ್ರಾರು ಭಕ್ತಾಧಿಗಳು ಬಂದರೆ, ಯಲ್ಲಮ್ಮನಗುಡ್ಡದಲ್ಲಿ ಆಗುವ ವಾಹನದಟ್ಟಣೆ ತಡೆಗಾಗಿ ಪೊಲೀಸ್ ಇಲಾಖೆ ಕ್ರಮ ವಹಿಸಿದೆ. ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ, ಜೋಗುಳಬಾವಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಗುಡ್ಡದ ಸುತ್ತಲಿನ ಪರಿಸರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಡಿವಾಯ್‌ಎಸ್‌ಪಿ 1, ಸಿಪಿಆಯ್ 1, ಪಿಎಸ್‌ಆಯ್ 7, 180 ಪೊಲೀಸ್ ಹಾಗೂ 20 ಹೋಂ ಗಾರ್ಡ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು  ಸಿಪಿಆಯ್ ಮಂಜುನಾಥ ನಡುವಿನಮನಿ ತಿಳಿಸಿದ್ದಾರೆ. 

ಸವದತ್ತಿಯಿಂದ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಅನುಕೂಲ ಆಗಲೆಂದು ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಕರ್ಯ ಕಲ್ಪಿಸಿದೆ. 

ಕರೊನಾ ಹಾವಳಿ ತಗ್ಗಿದ್ದರಿಂದ 20 ದಿನಗಳ ಹಿಂದಷ್ಡೇ ಯಲ್ಲಮ್ಮ ದೇಗುಲ ತೆರೆದಿದ್ದು, ನವರಾತ್ರಿ ಉತ್ಸವದ ವೇಳೆ ಸಾವಿರಾರು ಜನ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದು ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಶೀಗಿ ಹುಣ್ಣಿಮೆ ಬಂದಿರುವುದು ಕುಂಕುಮ- ಭಂಡಾರದ ನೆಲದಲ್ಲಿ ಸಂಭ್ರಮ ಕಳೆಗಟ್ಟಿದೆ. 


ಸುದ್ದಿ ಓದಿ