ಶಾರ್ಕ್ ದಾಳಿ: ಸಿಡ್ನಿ ಸಮುದ್ರಗಳಿಗೆ ಪ್ರವೇಶ ನಿರ್ಬಂಧ
ಸಿಡ್ನಿ: ಫೆಬ್ರವರಿ 17 : ಶಾರ್ಕ್ ದಾಳಿಯಲ್ಲಿ ಈಜುಗಾರ ಸಾವನ್ನಪ್ಪಿದ ನಂತರ ಸಿಡ್ನಿಯಲ್ಲಿ ಐಕಾನಿಕ್ ಬೋಂಡಿ ಮತ್ತು ಬ್ರಾಂಟೆ ಸೇರಿದಂತೆ ಹಲವಾರು ಸಮುದ್ರಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಸುಮಾರು 60 ವರ್ಷಗಳಲ್ಲಿ ನಗರದ ಬೀಚ್‌ಗಳಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ.
ಶಾರ್ಕ್‌ಗಳನ್ನು ಹಿಡಿಯಲು ಬಳಸಲಾಗುವ ಡ್ರಮ್ ಲೈನ್‌ಗಳನ್ನು ದಾಳಿಯ ಸ್ಥಳದ ಬಳಿ ಸ್ಥಾಪಿಸಲಾಗಿದೆ ಮತ್ತು ಇನ್ನು ಶಾರ್ಕ್ ಆಕ್ರಮಣಕಾರಿ ಪ್ರದೇಶಗಳಲ್ಲಿ ಡ್ರೋನ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಆಸ್ಟ್ರೇಲಿಯಾದ ಅತಿದೊಡ್ಡ ನಗರದಿಂದ ದಕ್ಷಿಣಕ್ಕೆ 20 ಕಿಮೀ (12 ಮೈಲುಗಳು) ಮತ್ತು ಬಾಟನಿ ಕೊಲ್ಲಿಯ ಪ್ರವೇಶದ್ವಾರದ ಸಮೀಪವಿರುವ ಲಿಟಲ್ ಬೇ ಬೀಚ್‌ನಿಂದ ಬುಧವಾರ ಮಧ್ಯಾಹ್ನ ವ್ಯಕ್ತಿಯ ಮೇಲೆ ಶಾರ್ಕ್ ದಾಳಿ ಮಾಡುವುದನ್ನು ಕಾಣಬಹುದು. ಈಜುಗಾರನ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಈ ದುರಂತ ಸಾವು ನಿಜಕ್ಕೂ ನಮಗೆ ಆಘಾತವನ್ನುಂಟು ಮಾಡಿದೆ ಎಂದು ರಾಂಡ್ವಿಕ್ ಕೌನ್ಸಿಲ್ನ ಮೇಯರ್ ಡೈಲನ್ ಪಾರ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮುರ್ರೆ ರೋಸ್ ಮಲಬಾರ್ ಮ್ಯಾಜಿಕ್ ಓಷನ್ ಸ್ವಿಮ್ ಗೆ ಕೆಲವು ದಿನಗಳ ಮೊದಲು ಈ ದಾಳಿ ನಡೆದಿದೆ. ಇದು ಸಾಮಾನ್ಯವಾಗಿ ನೆರೆಯ ಕಡಲತೀರದಲ್ಲಿ ಸಾವಿರಾರು ಈಜುಗಾರರು ಭಾಗವಹಿಸುವ ವಾರ್ಷಿಕ ದತ್ತಿ ಕಾರ್ಯಕ್ರಮವಾಗಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಮತ್ತು ಕಾರ್ಯಕ್ರಮವನ್ನು ಮುಂದೂಡಿದ್ದಲ್ಲಿ ಮಾರ್ಚ್ 6 ರಂದು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.a