ಶೃಂಗೇರಿ ಶಂಕರ ಮಠದಲ್ಲಿ ಶಂಕರಚಾರ್ಯ ಜಯಂತಿ ಆಚರಣೆ
Shankaracharya Jayanti celebrated at Sringeri Shankara Mutt
ಲೋಕದರ್ಶನ ವರದಿ
ಕಾರವಾರ 21 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಲಾದ ಶಂಕರಾಚಾರ್ಯ ಜಯಂತಿಯನ್ನು, ಶಂಕರಚಾರ್ಯರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಶೀಲ್ದಾರ ಪ್ರಮೋದ ನಾಯ್ಕ ಪುಷ್ಪ ನಮನ ಸಲ್ಲಿಸಿದರು. ಶಂಕರಾಚಾರ್ಯರರ ಕುರಿತು ಪದ್ಮಪುಷ್ಪದ ವೇದಾಂತ ಸಂಸ್ಕೃತ ಗುರುಕುಲದ ಪ್ರಾಚಾರ್ಯರು ಮತ್ತು ಸಂಸ್ಥಾಪಕ ಶಿವಮೂರ್ತಿ ಅರ್ ಜೋಯಿಸ್ ವಿಶೇಷ ಉಪನ್ಯಾಸ ನೀಡಿ, ಆದಿ ಶಂಕರಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನಚಾರಣೆ ಎಂದು ಘೋಷಣೆ ಮಾಡಲಾಗಿದೆ. ಶಂಕರಾಚಾರ್ಯರಿಗಿಂತ ಮತ್ತೊಬ್ಬ ಶ್ರೇಷ್ಠ ವ್ಯಕ್ತಿಯಿಲ್ಲ. ಅವರು ಪ್ರತಿಯೊಬ್ಬರಿಗೆ ಸಾರ್ವತ್ರಿಕವಾದ ಅನುಭವ ಭರಿತವಾದ ಕರ್ಮ, ಉಪಾಸನೆ, ಜ್ಞಾನವನ್ನು ಜಗತ್ತಿಗೆ ಅಧ್ವೈತ ಸಿದ್ದಾಂತ ಮೂಲಕ ಸಾರಿದರು. ಎಲ್ಲಾ ವೇದ ರಾಶಿಗಳು ಶಂಕರಚಾರ್ಯರು ರಸಿಚಿಸಿದ ಅದ್ವೈತ ತತ್ವದಿಂದ ಬಂದಿದೆ ಎಂದರು.
ಕರ್ಮವನ್ನು ಶ್ರದ್ಧೆಯಿಂದ ಮಾಡಿದಾಗ ಜ್ಞಾನ ಪ್ರಾಪ್ತಿ, ಜ್ಞಾನದಿಂದ ಮೋಕ್ಷ ಪಡೆಯಬಹುದು ಎಂದು ಪ್ರತಿಪಾದಿಸಿದ್ದು, ನಾಮ ಹಲವು ಪರಮಾತ್ಮನು ಒಬ್ಬನೇ ಎಂದು ಅದ್ವೈತ ತತ್ವದ ಮೂಲಕ ಎತ್ತಿ ಹಿಡಿದರು. ಅವರು ರಚಿಸಿದ ವೇದ, ಉಪಾಸನೆ ಅತ್ಯಮೂಲ್ಯವಾಗಿವೆ. ತತ್ವಶ್ತ್ರಾಸ ಮತ್ತು ದಾರ್ಶನಿಕ ಜಗತ್ತಿಗೆ ಆಳವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಒಳ್ಳೆಯ ಚಿಂತನೆ, ವಿಚಾರ, ತತ್ವಾದರ್ಶಗಳ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ವನಿತಾ ಶೇಟ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಮಠದ ಅಧ್ಯಕ್ಷ ಪ್ರಶಾಂತ ತೌಡುರು, ಸಮಾಜದ ಮಹಿಳಾ ಅಧ್ಯಕ್ಷೆ ವಿಜಯ ಮೋಹನ್ ಶೇಟ್ಟಿ, ಸಮಾಜದ ಅಧ್ಯಕ್ಷ ಜಗನಾಥ್ ಸಮುದಾಯದವರು ಉಪಸ್ಥಿತರಿದ್ದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 