ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ರಾಜ್ಯ ಪದಾಧಿಕಾರಿಗಳ ಆಯ್ಕೆ
Selection of State Office Bearers of All Karnataka Crop Surveyors
ಲೋಕದರ್ಶನ ವರದಿ
ವಿಜಯಪುರ 02: : ರಾಜ್ಯದ ಒಟ್ಟು 31 ಜಿಲ್ಲೆಯ ಸುಮಾರು 23,720 ಬೆಳೆ ಸಮೀಕ್ಷೆದಾರರುಗಳಿದ್ದು ಅವರೆಲ್ಲರ ಶ್ರೇಯೋಭಿವೃದ್ಧಿಗಾಗಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ನರಸಪ್ಪ ಅರ್ಜುನ ನಾವಿ ಅವರು ಈ ಸಂಘಟನೆಯನ್ನು ಹುಟ್ಟು ಹಾಕಿ ಮಂಗಳವಾರ ನಗರದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನ ಹುದ್ದೆಗಳನ್ನು ಕೊಡುವುದರ ಮೂಲಕ ಸಂಘಟನೆಯನ್ನು ಹಾಗೂ ಸಂಘದ ಪದಾಧಿಕಾರಿಗಳ ಹಿತ ಕಾಪಾಡುವುದೇ ಮೂಲ ಉದ್ದೇಶ, ಈಡೀ ರಾಜ್ಯದಲ್ಲಿ ಕೇವಲ 2-3 ತಿಂಗಳು ಮಾತ್ರ ಕೆಲಸಕ್ಕೆ ಬಳಸಿಕೊಂಡು ನಂತರ ನಮ್ಮನ್ನು ಕೈಬೀಡುವುದರಿಂದ ಕೆಲಸವಿಲ್ಲದೇ ನಮ್ಮನ್ನು ನಂಬಿದ ಕುಟುಂಬ ಸಂಕಷ್ಟಕ್ಕೆ ಇಡಾಗುತ್ತಿವೆ, ಆದ್ದರಿಂದಲೇ ಈ ಸಂಘವನ್ನು ನಿರ್ಮಿಸುವುದರ ಮೂಲಕ ರಾಜ್ಯವ್ಯಾಪಿ ಸಂಘಟನೆಯ ಪರವಾಗಿ ಸರಕಾರದ ಗಮನಕ್ಕೆ ತರುವುದರ ಮೂಲಕ ನಮ್ಮ ಹಕ್ಕನ್ನು ನಾವೂ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದರು.
ಈ ಕೆಳಗಿನ ಪದಾಧಿಕಾರಿಗಳಿಗೆ ಆದೇಶಪ್ರತಿ ನೀಡುವ ಮೂಲಕ ಸಂಘದ ಗುರಿ, ಉದ್ದೇಶವನ್ನು ಮುಂದಿನ ಸಂಘದ ನಡೆಯನ್ನು, ಹೋರಾಟದ ಹಾದಿಯ ಕುರಿತು ಎಲ್ಲರನ್ನು ಒಡಗೂಡಿ ಹೋರಾಟದ ಕುರಿತು ರೂಪರೇಷ ತಾಯರಿಸಲು ಬಹುದೊಡ್ಡ ನಿರ್ಣಯವನ್ನು ನಮ್ಮ ಸಂಘಟನೆಯಿಂದ ಮಾಡೋಣ ಎಂದು ಸಂಸ್ಥಾಪಕರಾದ ನರಸಪ್ಪ ನಾವಿ ವರು ಹೇಳಿದರು. ರಾಜ್ಯಾಧ್ಯಕ್ಷರಾಗಿ ಭೀಮಪ್ಪ ಲಕ್ಷ್ಮಣ ತಳವಾರ, ಉಪಾಧ್ಯಕ್ಷರಾಗಿ ಬಳ್ಳಾರಿಯ ವಿರೇಶ ಗಾದಿಲಿಂಗಪ್ಪ ಎ, ಪ್ರಧಾನ ಕಾರ್ಯದರ್ಶಿಗಳಾಗಿ ಕಲಬುರಗಿಯ ರಾಜಕುಮಾರ ಶಂಕರ, ಸಹ ಕಾರ್ಯದರ್ಶಿಯಾಗಿ ದಾವಣಗೇರೆಯ ಮಂಜುನಾಥ ಟಿ.ಹೆಚ್, ಖಚಾಂಜಿಯಾಗಿ ಬಾಗಲಕೋಟಿಯ ಬಸವರಾಜ ಸಿದ್ದಪ್ಪ ಹೊಳೆದಾಸರ, ಸಹ ಖಜಾಂಚಿಯಾಗಿ ಉಡುಪಿಯ ಪ್ರಕಾಶ ಉಮೇಶ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಹಾವೇರಿಯ ನಾಗರಾಜ ಬಸವಣ್ಣೆಪ್ಪ ಪೂಜಾರ, ಸಹ ಸಂಘಟನಾ ಕಾರ್ಯದರ್ಶಿಯಾಗಿ ವಿಜಯನಗರದ ದೇವೇಂದ್ರ್ಪ ಪ ಹಿರೇಹಡಗಲಿ, ಸಂಚಾಲಕರನ್ನಾಗಿ ಬೆಂಗಳೂರಿನ ಸಿದ್ದೇಗೌಡ ಸಿದ್ಧಮಲ್ಲಯ್ಯ ಹಾಗೂ ಇನ್ನೊರ್ವ ಸಹಸಂಚಾಲಕರನ್ನಾಗಿ ಚಿಕ್ಕಮಂಗಳೂರಿನ ಚಂದ್ರಶೇಖರ ಎಮ್.ಸಿ ಅವರನ್ನು ಆಯ್ಕೆ ಮಾಡಿ ಆದೇಶ ಪ್ರತಿ ನೀಡಲಾಯಿತು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 