16 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ
ಜೆಡ್ಡಾ: ಮೇ 23: ಕಳೆದ ಕೆಲವು ವಾರಗಳಲ್ಲಿ ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ತ್ವರಿತವಾಗಿ ಏರಿಕೆ ಕಂಡ ನಂತರ ಸೌದಿ ಅರೇಬಿಯಾ ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣ ನಿಷೇಧಿಸಿದೆ.
ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ವೆನೆಜುವೆಲಾ ಸೇರಿದಂತೆ ಸೌದಿ ಅರೇಬಿಯಾದ ಪ್ರಜೆಗಳು ಭಾರತದ ಹೊರತಾಗಿ ಪ್ರಯಾಣಿಸುವುದನ್ನು ನಿಷೇಧಿಸಿರುವ ಹದಿನಾರು ದೇಶಗಳು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದೇಶದಲ್ಲಿ ಮಂಕಿಪಾಕ್ಸ್ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ದೃಢಪಡಿಸಿದ್ದು, ಯಾವುದೇ ಶಂಕಿತ ಮಂಕಿಪಾಕ್ಸ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು, ಪತ್ತೆಹಚ್ಚಲು ಮತ್ತು ಯಾವುದೇ ಹೊಸ ಪ್ರಕರಣಗಳು ಕಂಡು ಬಂದರೆ ಸೋಂಕಿನ ವಿರುದ್ಧ ಹೋರಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದು ಉಪ ಆರೋಗ್ಯ ಸಚಿವ ಅಬ್ದುಲ್ಲಾ ಅಸಿರಿ ಹೇಳಿದ್ದಾರೆ.