ಬೆಳಗಾವಿ

ಸಂಬರಗಿ :ಅಕ್ರಮ ವಿದ್ಯುತ್ ಬಳಕೆಗೆ ಎಚ್ಚರಿಕೆ

ಸಂಬರಗಿ :ಅಕ್ರಮ ವಿದ್ಯುತ್ ಬಳಕೆಗೆ ಎಚ್ಚರಿಕೆ


ಸಂಬರಗಿ 16: ಜಂಬಗಿಯ ವಿದ್ಯುತ್ ಉಪಕೇಂದ್ರ ಕಚೇರಿಗೆ ಹೆಸ್ಕಾಂ ಉಪವಿಭಾಗದ ಅಧಿಕಾರಿ ಚಂದ್ರಶೇಖರ ಬೋಳಗಾವಿ ಅವರು ಅನೀರೀಕ್ಷಿತ ಭೇಟಿ ನೀಡಿ, ಅಧಿಕಾರಿಗಳಿಂದ ವಿದ್ಯುತ್ ಪೂರೈಕೆ ಕುರಿತು ಮಾಹಿತಿ ಪಡೆದರು.  

ಗಡಿ ಪ್ರದೇಶದ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ರೈತರ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರುಣಿಸಲು ಸಮರ​‍್ಕ ವಿದ್ಯುತ್ ಪೂರೈಕೆ ಮಾಡುವಂತೆ ಸೂಚಿಸಿದರು. ಕೃಷ್ಣಾ ದಂಡೆ ಪ್ರದೇಶದಲ್ಲಿ ಬುಧವಾರ ಮತ್ತು ಶುಕ್ರವಾರ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ಗಮನಿಸಿ, ವಿದ್ಯುತ್ ಪೂರೈಕೆಯನ್ನು ಸುಧಾರಿಸುವಂತೆ ತಿಳಿಸಿದರು.  

ರೈತರು ಜಾಗರೂಕರಾಗಿದ್ದು, ಅಕ್ರಮವಾಗಿ ವಿದ್ಯುತ್ ಬಳಸದಂತೆ ಎಚ್ಚರಿಕೆ ನೀಡಿದರು. ಅಕ್ರಮ ವಿದ್ಯುತ್ ಬಳಕೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ವಲಯ ಅಧಿಕಾರಿ ಕೆ.ಎಸ್‌. ಟಕ್ಕನವರ ಹಾಗೂ ಹಿರಿಯ ಅಧಿಕಾರಿ ರಮೇಶ ಘುಗರಿ ಉಪಸ್ಥಿತರಿದ್ದರು. 


ಸುದ್ದಿ ಓದಿ