ಮಾನಸಿಕ ರೋಗಿಗಳನ್ನು ಸಹಪಾಟಿಗಳಂತೆ ಕಾಣಿ: ಸದಾನಂದ ಸ್ವಾಮಿ
ಲೋಕದರ್ಶನ ವರದಿ
ಹಾವೇರಿ: ಮಾನಸಿಕ
ರೋಗಳನ್ನು ಸಮಾಜ ಬಂಧುಗಳು, ತಂದೆತಾಯಿ
ಸಹಪಾಟಿಯಂತೆ ಕಾಣಬೇಕು. ಸೂಕ್ತ ಚಿಕಿತ್ಸೆ ಮೂಲಕ ಸಾಮಾನ್ಯ ವ್ಯಕ್ತಿಯಂತೆ
ಬದುಕಲು ನೆರವು ಕಲ್ಪಿಸಬೇಕು ಎಂದು ಒಂದೆನೇ ಹೆಚ್ಚುವರಿ
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದ ಸ್ವಾಮಿ
ಹೇಳಿದರು.
ಜಿಲ್ಲಾಸ್ಪತ್ರೆ ಹಾಗೂ ವಿವಿಧ ಸಂಘಟನೆಗಳ
ಸಹಯೋಗದಲ್ಲಿ ನಗರದ ಸಿ.ಬಿ.
ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಖಾಯಿಲೆ ಒಂದು ಸಣ್ಣ ರೋಗ
ಸಕಾಲದಲ್ಲಿ ಸೂಕ್ತ ವೈದ್ಯಕೀಯ ನೆರವು ಪಡೆದರೆ ಗುಣಮುಖವಾಗಬಹುದು. ಆದರೆ ಬಹಳಷ್ಟು ಜನ
ತಪ್ಪು ಅಭಿಪ್ರಾಯದಿಂದ ಚಿಕಿತ್ಸೆ ಪಡೆಯದೇ ಮಾನಸಿಕ ಒತ್ತಡದಿಂದ ಖಾಯಿಲೆಯಿಂದ ಬಳಲುತ್ತಾರೆ ಎಂದರು.
ಕಲಿಕೆಗೆ ಶಿಕ್ಷಕರು, ಆರೋಗ್ಯಕ್ಕೆ ವೈದ್ಯರು ಪರಿಹಾರ ನೀಡುತ್ತಾರೆ. ಹಾಗೆಯೇ ಯಾವುದೇ ಮಾನಸಿಕ ದೌರ್ಬಲ್ಯಗಳಿದ್ದರೂ ಸಾಮಾನ್ಯ ಪರಿಹಾರಗಳಿರುತ್ತವೆ. ತಮ್ಮಲ್ಲಿರುವ ಉಂಟಾಗುವ ಒತ್ತಡದಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಸಾಮಾಜಿಕ ಜಾಲತಾಣಗಳು ಬಳಕೆ ಹಾಗೂ ಆಧುನಿಕ
ಜೀವನ ಕ್ರಮ ಒಂಟಿತನ ನಮ್ಮಲ್ಲಿ
ಮಾನಸಿಕ ಸಮಸ್ಯೆಗೆ ಕಾರಣವಾಗುತ್ತವೆ. ಇಂತಹ ಸಮಸ್ಯೆಗಳನ್ನು ಇತರರೊಂದಿಗೆ
ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು
ಸೇವಾ ಪ್ರಾಧಿಕಾರ ಸುಪ್ರೀಂಕೋಟರ್್ನ ನಿದರ್ೇಶನದಂತೆ ಅರಿವು, ನೆರವು ಕಾರ್ಯಕ್ರಮದ ಮೂಲಕ ಮಾನಸಿಕ ರೋಗದ
ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಹೇಳಿದರು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಯಾದ ವೈ.ಎಲ್. ಲಾಡ್ಖಾನ್
ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಟೋಬರ್ 10ರಂದು ಜಗತ್ತಿನ ಎಲ್ಲೆಡೆ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಮನುಷ್ಯ ಆರೋಗ್ಯವಂತನಾಗಿರಬೇಕು. ಉತ್ತಮ ನಾಗರೀಕನಾಗಿರಬೇಕಾದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಮುಖ್ಯವಾಗಿರುತ್ತದೆ.
ಮಾನಸಿಕ ಖಾಯಿಲೆ ಅತ್ಯಂತ ಕ್ಲಿಷ್ಟಕರವಾದದ್ದು, ಮನಸ್ಸಿನಲ್ಲಿರುವ ಅಡಗಿರುವ ಈ ಖಾಯಿಲೆಯನ್ನು ಹೊರನೋಟದಲ್ಲಿ
ಕಂಡು ಹಿಡಿಯುವುದು ಕಷ್ಟ. ಮಾನಸಿಕ ಅನಾರೋಗ್ಯದಿಂದ ದೈಹಿಕ ಆರೋಗ್ಯ ಕ್ಷೀಣಿಸುತ್ತದೆ. ಸಮಾಜದಲ್ಲಿ ತಾತ್ಸರಕ್ಕೆ ಒಳಗಾಗುವ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ನೆರವು ದೊರೆತರೆ
ಸಾಮಾನ್ಯರಂತೆ ಬದುಕಲು ಅವಕಾಶ ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಕಾನೂನು
ಸೇವೆ ಪ್ರಾಧಿಕಾರ ಮಾನಸಿಕ ರೋಗಿಗಳ ಸಮಾಜದ ಸ್ಪಂದನೆ, ಕಾನೂನಿನ ನೆರವು, ಉತ್ತಮ ಚಿಕಿತ್ಸೆಯ ಜಾಗೃತಿ ಮೂಡಿಸಲು ಹಾಗೂ ಮಾನಸಿಕ ಆರೋಗ್ಯಕ್ಕೆ
ಕಾರಣವಾಗುವ ವಿಷಯಗಳ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕು. ರೇಹನಾ ಚನ್ನಪಟ್ಟಣ,
ಮನೋವೈದ್ಯ ವಿಜಯ ಕುಮಾರ ಬಿ.,
ಡಾ. ಸಂತೋಷ, ಎಎಸ್ಐ ಸಾಗರ ವಿಶೇಷ ಉಪನ್ಯಾಸ
ನೀಡಿದರು. ಅಪರ ಜಿಲ್ಲಾಧಿಕಾರಿ ವಿನೋದ
ಹೆಗ್ಗಳಿಗಿ, ತರಬೇತಿ ದಿವಾಣಿ ನ್ಯಾಯಾಧೀಶರಾದ ಜಿ. ಹರೀಶ, ಕೆ.ಎಂ. ಹರೀಶ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಘವೇಂದ್ರಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ
ನೀರಲಗಿ, ಕಾರ್ಯದಶರ್ಿ ದೇವರಾಜ ನಾಯ್ಡು, ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಚನ್ನಪ್ಪ ಬಿ., ಡಾ. ಜಗದೀಶ
ಪಾಟೀಲ, ಡಾ. ಸತೀಶ ಇತರರು
ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 