ರಬಾಕಾವಿಬನಹಟ್ಟಿ

ಶ್ರೀಶೈಲ ಜಗ್ದುರುಗಳ ಆಶೀರ್ವಾದ ಪಡೆದ ಎಸ್‌. ಆರ್‌. ಪಾಟೀಲ

ಶ್ರೀಶೈಲ ಜಗ್ದುರುಗಳ ಆಶೀರ್ವಾದ ಪಡೆದ ಎಸ್‌. ಆರ್‌. ಪಾಟೀಲ

ರಬಕವಿ-ಬನಹಟ್ಟಿ 08: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಗುರುವಾರ ಶ್ರೀಶೈಲ ಕ್ಷೇತ್ರದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಹಾಗೂ  ಸ.ಸ.ಸಂಗಮೇಶ್ವರ ಮಠದ  ಪ್ರಭುಜಿ ಮಹಾರಾಜರು, ಜಮಖಂಡಿಯಲ್ಲಿ ಓಲೆಮಠದ  ಡಾ .ಚನ್ನಬಸವ ಸ್ವಾಮೀಜಿ ಮತ್ತು ಹುನ್ನೂರನಲ್ಲಿ ಬಸವಜ್ಞಾನ ಗುರುಕುಲದ  ಡಾ ಈಶ್ವರ ಮಂಟೂರ ಶ್ರೀಗಳನ್ನು ಭೆಟ್ಟಿ ಮಾಡಿ ಗೌರವಿಸಿ, ಆಶೀರ್ವಾದ ಪಡೆದರು.  

ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಹಿಪ್ಪರಗಿ ಗ್ರಾಮದ ಮುಖಂಡರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ ಕಲೂತಿ, ಸುಶೀಲಕುಮಾರ ಬೆಳಗಲಿ, ಸಮೀರ್ ಕಂಗನ್ನೊಳ್ಳಿ, ನಿಂಗನಗೌಡ ಪಾಟೀಲ, ನಾಗರಾಜ ಹದ್ಲಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ