ಅಂತರರಾಷ್ಟ್ರೀಯ

ಆರು ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ರಷ್ಯಾ ಸೈನಿಕ; ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುತ್ತೇನೆಂದು ಬೆದರಿಕೆ

ಆರು ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ರಷ್ಯಾ ಸೈನಿಕ; ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುತ್ತೇನೆಂದು ಬೆದರಿಕೆ

ಕೈವ್: ಏಪ್ರಿಲ್ 28: “ನೀವು ಈಗ ನನ್ನೊಂದಿಗೆ ಮಲಗಬೇಕು, ಅಥವಾ ಇಲ್ಲದಿದ್ದರೆ ನಾನು ಇನ್ನೂ 20 ಪುರುಷರನ್ನು ಕರೆತರುತ್ತೇನೆ,” ಇದು ರಷ್ಯಾದ ನಿಯಂತ್ರಣದಲ್ಲಿರುವ ಖೆರ್ಸನ್ ಗ್ರಾಮದಲ್ಲಿ 16 ವರ್ಷದ ಗರ್ಭಿಣಿ ಮೇಲೆ ಅತ್ಯಾಚಾರವೆಸಗುವ ಮೊದಲು ಕುಡಿದ ರಷ್ಯಾದ ಸೈನಿಕನ ಮಾತುಗಳು.

ರಷ್ಯಾದ ನಿಯಂತ್ರಣದಲ್ಲಿರುವ ಖೆರ್ಸಾನ್ ನಲ್ಲಿ ಆರು ತಿಂಗಳ ಗರ್ಭಿಣಿ ಯುವತಿ ಮೇಲೆ ರಷ್ಯಾದ ಸೈನಿಕ ಅತ್ಯಾಚಾರ ಎಸಗಿದ್ದಾನೆ. ಕುಡಿದ ಅಮಲಿನಲ್ಲಿದ್ದ ಯೋಧ ತನ್ನ ಕತ್ತು ಹಿಸುಕುವುದಾಗಿ ಮತ್ತು ವಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬದುಕುಳಿದವರು ಮತ್ತು ಆಕೆಯ ಕುಟುಂಬ ಬಾಂಬ್ ದಾಳಿಯಿಂದ ಪಾರಾಗಲು ಮನೆಯ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದರು. ಮುಸ್ಸಂಜೆಯಲ್ಲಿ ಊಟಕ್ಕೆಂದು ಮಕ್ಕಳನ್ನು ಕರೆದುಕೊಂಡು ಹೋದಾಗ ಕುಡುಕ ಸೈನಿಕ ವಿಚಾರಿಸಿ ಮೊದಲು ಸಂತ್ರಸ್ತೆಯ ತಾಯಿಯನ್ನು ಕರೆದಿದ್ದಾರೆ. ಅವರನ್ನು ಆದಷ್ಟು ಬೇಗ ಕಳಿಸಿದ್ದಾರೆ. ನಂತರ ಯುವತಿ ಮೇಲೆ ಕೂಗಾಡುಲು ಶುರು ಮಾಡಿದ ಆಕೆಗೆ ಬಟ್ಟೆಯನ್ನು ಬಿಚ್ಚುವಂತೆ ಬೆದರಿಸಿದ್ದಾನೆ. ತದನಂತರ ನೀನು ಈಗ ನನ್ನೊಂದಿಗೆ ಮಲಗಬೇಕು, ಅಥವಾ ಇಲ್ಲದಿದ್ದರೆ ನಾನು ಇನ್ನೂ 20 ಪುರುಷರನ್ನು ಕರೆತರುತ್ತೇನೆ ಎಂದು ಬೆದರಿಸಿದ್ದಾನೆ. ವಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಸುದ್ದಿ ಓದಿ