ಜಾರ್ಜಿಯಾ ಮೂಲಕ ಉಕ್ರೇನ್‌ಗೆ ರಷ್ಯಾ ಸೈನ್ಯ: ಅಮೆರಿಕ
ವಾಷಿಂಗ್ಟನ್: ಮಾರ್ಚ್ 26 : ಉಕ್ರೇನ್ ನ ಆಗ್ನೇಯ ಭಾಗದಲ್ಲಿರುವ ಡಾನ್ ಬಾಸ್ ಪ್ರದೇಶದಲ್ಲಿ ತನ್ನ ಆಕ್ರಮಣವನ್ನು ಬೆಂಬಲಿಸಲು ರಷ್ಯಾ ಜಾರ್ಜಿಯಾದಿಂದ ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸುತ್ತಿದೆ ಎಂದು ಯುಎಸ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್ ಪತ್ತೆ ಹಚ್ಚಿದೆ. ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ, “ಜಾರ್ಜಿಯಾದಿಂದ ರಷ್ಯಾ ಸೈನ್ಯವನ್ನು ಕಳುಹಿಸುವ ಕೆಲವು ಸಂಕೇತಗಳು ನಮಗೆ ಸಿಕ್ಕಿವೆ. ಜಾರ್ಜಿಯಾದಲ್ಲಿ ಸೈನ್ಯದ ಕೆಲವು ಚಟುವಟಿಕೆಗಳನ್ನು ನೋಡಿದ್ದೇವೆ. ಆದರೆ ಅದರ ನಿಖರವಾದ ಸಂಖ್ಯೆ ಎಷ್ಟು ಎಂಬುದು ತಿಳಿದುಬಂದಿಲ್ಲ” ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ ಜಾರ್ಜಿಯಾದಲ್ಲಿ ರಷ್ಯಾದ ಸೈನ್ಯ ಇಲ್ಲ. ಆದ್ರೆ, ಜಾರ್ಜಿಯಾ ದೇಶದ ಹೆಸರು ಏಕೆ ಬಳಕೆ ಮಾಡಲಾಗಿದೆ ಎಂದು ಸ್ಪುಟ್ನಿಕ್ ಪ್ರಶ್ನಿಸಿದಾಗ ಪೆಂಟಗಾನ್ ಅಧಿಕಾರಿ ತಕ್ಷಣ ಪ್ರತಿಕ್ರಿಯಿಸಲಿಲ್ಲ.