ರಷ್ಯಾ ಸೇನೆ ಉಕ್ರೇನ್ ನ ಮೆಲಿಟೊಪೋಲ್ ಮೇಯರ್ ರನ್ನ ಅಪಹರಿಸಿದೆ ಎಂದು ಆರೋಪಿಸಿದ : ಝೆಲೆನ್ಸ್ಕಿ
ಉಕ್ರೇನ್ : ಮಾರ್ಚ್ 13 : ಉಕ್ರೇನಿಯನ್ ಅಧ್ಯಕ್ಷ ಝೆಲಿನ್ಸ್ಕಿ ಮೆಲಿಟೊಪೋಲ್ ಮೇಯರ್ ಅವರನ್ನು ರಷ್ಯಾದ ಪಡೆಗಳು ಅಪಹರಿಸಿರುವುದಾಗಿ ಆರೋಪಿಸಿದ್ದಾರೆ.ರಷ್ಯಾ ಐಸಿಸ್ ಭಯೋತ್ಪಾದಕರ ರೀತಿ ರಾಕ್ಷಸರಂತೆ ವರ್ತಿಸುತ್ತಿದೆ ಎಂದು ಉಕ್ರೇನ್ ಸೇನೆ ಹೇಳಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಒತ್ತೆಯಾಳಾಗಿ ಇರಿಸಲಾಗುತ್ತಿದೆ ಎಂಬ ಆರೋಪ ಮಾಡಿದೆ. ಇದರೊಂದಿಗೆ ರಷ್ಯಾ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಉಕ್ರೇನ್ ಜನರಿಗೆ ಕರೆ ನೀಡಿದರು. ಉಕ್ರೇನಿಯನ್ ಅಧ್ಯಕ್ಷೀಯ ವಕ್ತಾರ, ಮೇಯರ್ ಅನ್ನು ರಷ್ಯಾದ ಸೈನಿಕರು ಅಪಹರಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಬೇಡಿ..
ರಷ್ಯಾದ ತಾಯಂದಿರಿಗೆ ಜೆಲೆನ್ಸ್ಕಿ ಮನವಿ, ದಯವಿಟ್ಟು ನಿಮ್ಮ ಮಕ್ಕಳನ್ನು ಯುದ್ಧಭೂಮಿಗೆ ಕಳುಹಿಸಬೇಡಿ, ಅವರ ಜೀವಕ್ಕೆ ಅಪಾಯವನ್ನುಂಟುಮಾಡಬೇಡಿ” ಎಂದು ಝೆಲೆನ್ಸ್ಕಿ ರಷ್ಯಾದ ಮಹಿಳೆಯರಿಗೆ ಮನವಿ ಮಾಡಿದರು. ಉಕ್ರೇನ್‌ನಲ್ಲಿ ನಾಗರಿಕರನ್ನು ಯುದ್ಧಕ್ಕೆ ತರಲು ರಷ್ಯಾ ಪ್ರಯತ್ನಿಸುತ್ತಿದೆ ಮತ್ತು ಅವರಿಗೆ ಉದ್ಯೋಗ ನೀಡಲಾಗುವುದು ಮತ್ತು ಮಿಲಿಟರಿ ತರಬೇತಿಯನ್ನು ಮಾತ್ರ ನೀಡಲಾಗುವುದು ಎಂಬ ವದಂತಿಗಳನ್ನು ನಂಬಬೇಡಿ ಎಂದು ಅವರು ಜನರನ್ನು ಒತ್ತಾಯಿಸಿದರು. ಉಕ್ರೇನ್ ನ 1,300 ಸೈನಿಕರು ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು. ರಷ್ಯಾ ಸೇನೆ ಕೀವ್ ವಶಪಡಿಸಿಕೊಳ್ಳಲು ಮುಗ್ಧ ಜನರ ಪ್ರಾಣತೆಗೆಯುತ್ತಿದೆ ಎಂದು ಆರೋಪಿಸಿದರು.