ಅಂತರರಾಷ್ಟ್ರೀಯ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಲವ್ ಸ್ಟೋರಿ!

ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ಲವ್ ಸ್ಟೋರಿ!

ಹೊಸದಿಲ್ಲಿ 28:  ಯಾವಾಗ್ಲೂ ಸುದ್ದಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕುಟುಂಬದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಇರುವ ರಹಸ್ಯ ಮಾಹಿತಿಯನ್ನು ಯು.ಎನ್.ಐ. ಕನ್ನಡ ಹೆಕ್ಕಿ ತೆಗೆದಿದೆ. ಬಹಳಷ್ಟು ಚರ್ಚೆಯಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್, ಕೆಲವೊಮ್ಮೆ ಐಷಾರಾಮಿ ಜೀವನ, ಕೆಲವು ಸಲ ಅವರ ಹವ್ಯಾಸ, ಇನ್ನೂ ಕೆಲವೊಮ್ಮೆ ಅವರ ಅರಮನೆಯ ಫೋಟೋಗಳು ಸೋರಿಕೆಯೊಂದಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ, ಪುಟಿನ್ ತಮ್ಮ ಕುಟುಂಬದ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ.ಕೆಲ ಸಮಯದ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್, ಕೋವಿಡ್ ವ್ಯಾಕ್ಸಿನೇಷನ್ ಸಮಯದಲ್ಲಿ ತಮ್ಮ ಮಗಳ ಬಗ್ಗೆ ಚರ್ಚೆ ಮಾಡಿದ್ದರು. ತಮ್ಮ ಮಗಳಿಗೂ ಲಸಿಕೆ ನೀಡಲಾಗಿದೆ ಇಲ್ಲೋ ಅನ್ನೋ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಪುಟಿನ್ ತನ್ನ ಹೆಣ್ಣುಮಕ್ಕಳ ಗುರುತನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ತನಗೆ ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಅವರು ಹೇಳಿರುವುದನ್ನು ಹೆಚ್ಚಿನ ಜನ್ರು ಕೇಳಿದ್ದಾರೆ. ಆದರೆ, ಅವರ ಕುಟುಂಬ ಯಾವಾಗಲೂ ಜನರಿಂದ ದೂರ ಇರುತ್ತದೆ.ಪುಟಿನ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ರಷ್ಯಾ ಅಧ್ಯಕ್ಷ ಸ್ವತಃ ಟಿವಿ ಚಾನೆಲ್‌ನಲ್ಲಿ ಪ್ರಕಟಿಸಿದ್ದರು. ಪುಟಿನ್ ಅವರ ಮಾಜಿ ಪತ್ನಿಯ ಹೆಸರು ಲ್ಯುಡ್ಮಿಲಾ. ಲ್ಯುಡ್ಮಿಲಾ ಮದುವೆಗೆ ಮೊದಲು ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅದು ಆ ಸಮಯದಲ್ಲಿ ತುಂಬಾ ಒಳ್ಳೆಯ ಕೆಲಸವಾಗಿತ್ತು. 1980ರ ದಶಕದ ಆರಂಭದಲ್ಲಿ ಇಬ್ಬರೂ ಥಿಯೇಟರ್‌ನಲ್ಲಿ ಭೇಟಿಯಾಗಿದ್ದರು. ಇಬ್ಬರೂ ಸಮಾನ ಗೆಳೆಯರಿಂದ ಆಹಾನಿಸಲ್ಪಟ್ಟಿದ್ದರಿಂದ ಪುಟಿನ್ ಹಾಗೂ ಲ್ಯುಡ್ಮಿಲಾ ಸ್ನೇಹಿತರಾದರು.ಪುಟಿನ್ ಮತ್ತು ಅವರ ಮಾಜಿ ಪತ್ನಿ ಲ್ಯುಡ್ಮಿಲಾ ಅವರ ಚಿತ್ರಗಳು 28 ಜುಲೈ 1983ರಂದು ಬೆಳಕಿಗೆ ಬಂದವು. ತಮ್ಮ ಮದುವೆಯ ಸುಮಾರು 30 ವರ್ಷಗಳ ನಂತರ 2013ರಲ್ಲಿ ಪುಟಿನ್ ತಮ್ಮ ಪತ್ನಿಯಿಂದ ಬೇರ್ಪಡುವುದಾಗಿ ಘೋಷಣೆ ಮಾಡಿದರು. ಆದರೆ, ಈ ಇಬ್ಬರು ಯಾವಾಗ ಮದ್ವೆಯಾದ್ರು ಅನ್ನೋದರ ಬಗ್ಗೆ ಮಾಹಿತಿ ಇಲ್ಲ.ರಷ್ಯಾದ ಅಧ್ಯಕ್ಷ ಪುಟಿನ್ ಹಾಗೂ ಮಾಜಿ ಪತ್ನಿ ಲ್ಯುಡ್ಮಿಲಾ ಅವರಿಗೆ ಮಾರಿಯಾ ವೊರೊಂಟ್ಸೊವಾ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಮಾರಿಯಾ ವೊರೊಂಟ್ಸೊವಾ 1985ರಲ್ಲಿ ಲೆನಿನ್ ಗಾರ್ಡನ್ ನಲ್ಲಿ ಜನಿಸಿದ್ರು. ಒಂದು ವರ್ಷದ ನಂತರ ಕಟೆರಿನಾ ಟಿಖೋನೋವಾ ಜರ್ಮನಿಯಲ್ಲಿ 1986ರಲ್ಲಿ ಜನಿಸಿದರು. ಇಬ್ಬರು ಹೆಣ್ಣುಮಕ್ಕಳಿಗೂ ಅಜ್ಜಿಯ ಹೆಸರನ್ನು ಇಡಲಾಗಿದೆ.ಪುಟಿನ್ ತನ್ನ ಕುಟುಂಬದೊಂದಿಗೆ 1996ರಲ್ಲಿ ಮಾಸ್ಕೋಗೆ ತೆರಳಿದರು. ಅಲ್ಲಿ ಅವರ ಹೆಣ್ಣುಮಕ್ಕಳಾದ ವೊರೊಂಟ್ಸೊವಾ ಮತ್ತು ಟಿಖೋನೊವಾ ಜರ್ಮನ್ ಭಾಷಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಪುಟಿನ್ 1999 ರಲ್ಲಿ ಕಾರ್ಯಕಾರಿ ಅಧ್ಯಕ್ಷರಾದ ನಂತರ ಅವರ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಮನೆಯಿಂದಲೇ ಓದಿಸಲಾಗುತ್ತಿತ್ತು.ಪುಟಿನ್ ಅವರ ಇಬ್ಬರೂ ಪುತ್ರಿಯರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ನಕಲಿ ಗುರುತಿನೊಂದಿಗೆ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ವೊರೊಂಟ್ಸೊವಾ ಮೊದಲು ಜೀವಶಾಸ್ತ್ರ ಮತ್ತು ನಂತರ ವೈದ್ಯಕೀಯ ಅಧ್ಯಯನ ಮಾಡಿದರು. ಟಿಖೋನೋವಾ ಏಷ್ಯನ್ ಅಧ್ಯಯನದಲ್ಲಿ ಅಧ್ಯಯನ ಮಾಡಿದರು.ವೊರೊಂಟ್ಸೊವಾ ಮಾಸ್ಕೋದಲ್ಲಿ ವೈದ್ಯಕೀಯ ಸಂಶೋಧಕರಾಗಿದ್ದಾರೆ ಮತ್ತು ಜೋರಿಟ್ ಫಾಸೆನ್ ಅವರನ್ನು ವಿವಾಹವಾದ್ರು ಎಂದು ಹೇಳಲಾಗುತ್ತದೆ. ಇಬ್ಬರಿಗೂ ಒಂದು ಮಗು ಕೂಡ ಇದೆ ಎಂದು ವರದಿಯಾಗಿದೆ. ಟಿಖೋನೋವಾ ಅವರು ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ರಾಕ್ ‘ಎನ್’ ರೋಲ್ ಡ್ಯಾನ್ಸರ್ ಕೂಡ ಆಗಿದ್ದಾರೆ. ಬಳಿಕ ಟಿಖೋನೋವಾ ಅವರು ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ಸ್ಟಿಟ್ಯೂಟ್ ಮುಖ್ಯಸ್ಥರಾಗಿದ್ದಾರೆ. 2013ರಲ್ಲಿ ಟಿಖೋನೋವಾ ರಷ್ಯಾದ ಬಿಲಿಯನೇರ್ ಕಿರಿಲ್ ಶಮಾಲೋವ್ ಅವರನ್ನು ವಿವಾಹವಾದ್ರು ಎಂದು ಹೇಳಲಾಗುತ್ತದೆ. ಆದರೆ 5 ವರ್ಷಗಳ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.

ಸುದ್ದಿ ಓದಿ