ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಕೈವ್: ಫೆಬ್ರವರಿ 24 : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ಗೆ ಅನುಮೋದನೆ ನೀಡುವ ಮೂಲಕ ಯುದ್ಧವನ್ನು ಘೋಷಿಸಿದರುಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕಂಡುಬಂದಿವೆ. ಉಕ್ರೇನ್‌ನ ಖಾರ್ಕಿವ್, ಡೊನೆಟ್ಸ್ಕ್ ಪ್ರಾಂತ್ಯದ ಉಕ್ರೇನಿಯನ್ ನಗರವಾದ ಮರಿಯುಪೋಲ್ ಮತ್ತು ರಷ್ಯಾದ ಬೆಲ್ಗೊರೊಡ್ ಒಬ್ಲಾಸ್ಟ್ ನಲ್ಲಿಯೂ ಬಳಿ ದೊಡ್ಡ ಸ್ಫೋಟಗಳು ವರದಿಯಾಗಿದೆ.
ಇದು ನಾಗರಿಕರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಅವರು, ದೂರದರ್ಶನದ ಭಾಷಣದಲ್ಲಿ ಪುಟಿನ್, ಉಕ್ರೇನ್‌ನಿಂದ ಬರುತ್ತಿರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ರಷ್ಯಾ ಹೊಂದಿಲ್ಲ. ರಕ್ತಪಾತಕ್ಕೆ ಉಕ್ರೇನಿಯನ್ ‘ಆಡಳಿತ’ವೇ ನೇರ ಹೊಣೆ ಎಂದು ಪುಟಿನ್ ಹೇಳಿದ್ದಾರೆ.
ಇನ್ನು ರಷ್ಯಾದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನ ಮಾಡಿದ್ದಲ್ಲಿ ಮುಂದೆಂದೂ ಊಹಿಸದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟಿನ್ ಇತರ ದೇಶಗಳಿಗೆ ಎಚ್ಚರಿಕೆ ನೀಡಿದರು. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲಿದೆ ಎಂದು ಹೇಳಿಕೆ ನೀಡಿದ ಗಂಟೆಗಳ ತರುವಾಯ ಈ ಕ್ರಮ ಜರುಗಿಸಲಿದೆ.