ಸಿರಿಯಾದಲ್ಲಿ ಮಾನವೀಯ ನೆರವು ಕೇಂದ್ರಗಳನ್ನು ಹೆಚ್ಚಿಸಲಿರುವ ರಷ್ಯಾ
ಖಮೇಶ್ಲಿ, ನ 19 : ಯುದ್ಧ ಪೀಡಿತ ಸಿರಿಯಾ ದೇಶದಲ್ಲಿ ಅಳವಡಿಸಿರುವ ಮಾನವೀಯ ನೆರವು ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಮುಂದಾಗಿದೆ. ರಷ್ಯಾ ರಕ್ಷಣಾ ಸಚಿವಾಲಯದ ಸಿರಿಯಾದ ಪುನರ್ವಸತಿ ಕೇಂದ್ರದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಮೂರು ಹೊಸ ಮಾನವೀಯ ನೆರವು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿರಿಯಾದಲ್ಲಿ ಮಾನವೀಯ ದುರಂತಗಳಿಗೆ ಗುರಿಯಾದ ಪ್ರದೇಶಗಳಿಗೆ ಇಲಿಯುಶಿನ್ 2-76 ಬಹುಪಯೋಗಿ ವಿಮಾನವನ್ನು ಬಳಸಿಕೊಂಡು ಭೂಮಿ ಮತ್ತು ವಾಯು ಸಾರಿಗೆ ಮೂಲಕ ನೆರವು ಒದಗಿಸುತ್ತಿದೆ. ರಷ್ಯಾ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ್ದು, ಸೇನಾ ಸಾರಿಗೆ ವಿಮಾನವನ್ನು ಬಳಸಿಕೊಂಡು ಸಿರಿಯಾದ ಖಮೇಶ್ಲಿ ಪ್ರಾಂತ್ಯಕ್ಕೆ 15 ಮೆಟ್ರಿಕ್ ಟನ್ ಮಾನವೀಯ ನೆರವಿನ ವಸ್ತುಗಳನ್ನು ಸಾಗಿಸಲಾಗಿದೆ. ಇದನ್ನು ಸಿರಿಯನ್ ಅರಬ್ ರಿಪಬ್ಲಿಕ್ ನ ಆಗ್ನೇಯ ಭಾಗಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ನೆರವು ಗೋದಿ, ಅಕ್ಕಿ,ಸಕ್ಕರೆ, ಟೀ ಮತ್ತು ಅತಿ ಅಗತ್ಯದ ವಸ್ತುಗಳನ್ನು ಒಳಗೊಮಡಿದ್ದು, ಆರು ಸ್ಥಳೀಯ ಮಾನವೀಯ ನೆರವು ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಸಿರಿಯಾದಲ್ಲಿ ಕದನ ವಿರಾಮ ಜಾರಿಗೊಳಿಸುವ ಹೊಣೆ ಹೊತ್ತುಕೊಂಡಿರುವ ರಷ್ಯಾ ನಿರಂತರವಾಗಿ ಮಾನವೀಯ ನೆರವನ್ನು ಒದಗಿಸುತ್ತಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 