ಅಂತರರಾಷ್ಟ್ರೀಯ

ಉಕ್ರೇನ್ ಭೂಗತ ಕ್ಷಿಪಣಿ ಡಿಪೊವನ್ನ ಸ್ಪೋಟಿಸಲು ‘ಕಿಂಜಾಲ್’ ಕ್ಷಿಪಣಿ ಬಳಸಿದ ರಷ್ಯಾ

ಉಕ್ರೇನ್ ಭೂಗತ ಕ್ಷಿಪಣಿ ಡಿಪೊವನ್ನ ಸ್ಪೋಟಿಸಲು ‘ಕಿಂಜಾಲ್’ ಕ್ಷಿಪಣಿ ಬಳಸಿದ ರಷ್ಯಾ

ಮಾಸ್ಕೋ: ಮಾರ್ಚ್ 19: ರಷ್ಯಾ ಪಡೆಯು ಉಕ್ರೇನ್‌ನ ಭೂಗತ ಕ್ಷಿಪಣಿ ಡಿಪೋವನ್ನು ಸ್ಫೋಟಿಸಿದೆ. ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ರಷ್ಯಾ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್ ನೆಲೆಯ ಮೇಲೆ ದಾಳಿ ಮಾಡಿದೆ. ಉಕ್ರೇನ್ ಮೇಲೆ ದಾಳಿ ನಡೆಸಲು ಕಿಂಜಾಲ್ ವಾಯುಯಾನ ಕ್ಷಿಪಣಿಯನ್ನು ಮೊದಲಬಾರಿಗೆ ಬಳಸಿದ ದೇಶ ರಷ್ಯಾ ಎಂದು ಹೇಳಲಾಗುತ್ತದೆ.

ಕಿಂಜಾಲ್ ಕ್ಷಿಪಣಿಯು ಶಬ್ದಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಭೂಗತ ನೆಲಮಾಳಿಗೆಯಲ್ಲಿದ್ದ ಗೋದಾಮೊಂದನ್ನ ಈ ಕಿಂಜಾಲ್ ನಾಶಮಾಡಿದೆ ಎಂದು ರಷ್ಯಾದ ರಕ್ಷಣಾ ಕಚೇರಿ ತಿಳಿಸಿದೆ. ಕ್ಷಿಪಣಿ ಡಿಪೋ ಇವಾನೊ ಫ್ರಾಂಕಿವಿಕ್ ಪ್ರದೇಶದ ಡೆಲಿಯಾಂಟಿನ್ ಗ್ರಾಮದಲ್ಲಿದೆ.

MiG-31K ಸೂಪರ್ಸಾನಿಕ್ ಇಂಟರ್ಸೆಪ್ಟರ್ ವಿಮಾನವು ಈ ಕಿಂಜಾಲ್ ಕ್ಷಿಪಣಿಗಳನ್ನು ಹೊತ್ತೊಯ್ಯುತ್ತದೆ. ನ್ಯಾಟೋ ಪಡೆಗಳು ಈ ವಿಮಾನವನ್ನು ಫಾಕ್ಸ್‌ಹೌಂಡ್ ಎಂದು ಕರೆಯುತ್ತವೆ. ಇದು ಹೆಚ್ಚಿನ ಹೈಪರ್ಸಾನಿಕ್ ವ್ಯವಸ್ಥೆಗಳಲ್ಲಿ ಕಂಡುಬರುವ ಯಂತ್ರಾಂಶವನ್ನು ಒಳಗೊಂಡಿದ್ದೂ. ಇವುಗಳಲ್ಲಿ ಅವಂಗಾರ್ಡ್ ಗ್ಲೈಡರ್ ಸೇರಿದೆ. ಸಾಮಾನ್ಯವಾಗಿ ಈ ಗ್ಲೈಡರ್‌ಗಳು ICBM ನಲ್ಲಿ ಇರುತ್ತವೆ .

ಸುದ್ದಿ ಓದಿ