ಅಂತರರಾಷ್ಟ್ರೀಯ

ಉಕ್ರೇನ್ – ರಷ್ಯಾ ಯುದ್ದದಲ್ಲಿ ಎರಡನೇ ಮೇಜರ್ ಜನರಲ್ ರನ್ನ ಕಳೆದುಕೊಂಡ ರಷ್ಯಾ

ಉಕ್ರೇನ್ – ರಷ್ಯಾ ಯುದ್ದದಲ್ಲಿ ಎರಡನೇ ಮೇಜರ್ ಜನರಲ್ ರನ್ನ ಕಳೆದುಕೊಂಡ ರಷ್ಯಾ

ಕೀವ್: ಮಾರ್ಚ್  08 : ವ್ಲಾದಿಮಿರ್ ಪುಟಿನ್ ಗೆ ಭಾರೀ ಹಿನ್ನಡೆಯಾಗಿದೆ. ಉಕ್ರೇನ್ ಮೇಲೆ ಯುದ್ಧಕ್ಕೆ ಇಳಿದ ರಷ್ಯಾ ಮತ್ತೊಬ್ಬ ಜನರಲ್ ರನ್ನ ಕಳೆದುಕೊಂಡಿದೆ. ಖಾರ್ಕಿವ್‌ನಲ್ಲಿ ನಡೆದ ಯುದ್ಧದಲ್ಲಿ ಟಾಪ್ ಕಮಾಂಡರ್ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಮರಣ ಹೊಂದಿರುವುದಾಗಿ ಉಕ್ರೇನಿಯನ್ ಮಿಲಿಟರಿ ಘೋಷಿಸಿದೆ. ಒಂದು ವಾರದೊಳಗೆ, ರಷ್ಯಾದ ಸೈನ್ಯವು ತನ್ನ ಎರಡನೇ ಜನರಲ್ ಅನ್ನು ಕಳೆದುಕೊಂಡಿದೆ.

 ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಅವರು 41 ನೇ ಸೇನಾ ರೆಜಿಮೆಂಟ್‌ನ ಮುಖ್ಯಸ್ಥರಾಗಿದ್ದರು. ಉಕ್ರೇನಿಯನ್ ಗುಪ್ತಚರ ಪ್ರಕಾರ, ಖಾರ್ಕಿವ್‌ನಲ್ಲಿನ ದಾಳಿಯು ಜನರಲ್ ವಿಟಾಲಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸತ್ತಿದ್ದಾರೆ. ರಷ್ಯಾದ ಇಬ್ಬರು ಗುಪ್ತಚರ ಅಧಿಕಾರಿಗಳು ವಿಟಾಲಿ ಸಾವಿನ ಬಗ್ಗೆ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಅನ್ನು ಉಕ್ರೇನ್ ಬಿಡುಗಡೆ ಮಾಡಿದೆ. ರಷ್ಯಾದ ಕಮ್ಯೂನಿಕೇಷನ್ ವ್ಯವಸ್ಥೆಯು ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತೋರುತ್ತದೆ.

ಜನರಲ್ ಗೆರಾಸಿಮೊವ್ ಎರಡನೇ ಚೆಚೆನ್ ಯುದ್ಧದಲ್ಲಿ ಭಾಗವಹಿಸಿದರು. ಸಿರಿಯಾದಲ್ಲಿ ರಷ್ಯಾದ ಕಾರ್ಯಾಚರಣೆಯಲ್ಲಿ ವಿಟಾಲಿ ಭಾಗಿಯಾಗಿದ್ದರು. ರಷ್ಯಾದ ಸೈನ್ಯವು ಅವರಿಗೆ ವಿಶೇಷ ಪದಕವನ್ನು ಸಹ ನೀಡಿತು. ಒಂದು ವಾರದ ಹಿಂದೆ ಉಕ್ರೇನ್ ಸೇನೆಯ ಮೇಲೆ ನಡೆದ ದಾಳಿಯಲ್ಲಿ ರಷ್ಯಾದ ಮೇಜರ್ ಜನರಲ್ ಆಂಡ್ರ್ಯೂ ಸುಖೋವ್ಸ್ಕಿಯ ಸಾವಿಗೀಡಾಗಿದ್ದಾರೆ.

ಸುದ್ದಿ ಓದಿ