ಅಂತರರಾಷ್ಟ್ರೀಯ

ಅಮೇರಿಕಾ ನಿರ್ಭಂದಗಳ ನಂತರ ಭಾರತ ಕಡೆ ತಿರುಗಿ ನೋಡುತ್ತಿರುವ ರಷ್ಯಾ

ಅಮೇರಿಕಾ ನಿರ್ಭಂದಗಳ ನಂತರ ಭಾರತ ಕಡೆ ತಿರುಗಿ ನೋಡುತ್ತಿರುವ ರಷ್ಯಾ

ರಷ್ಯಾ : ಮಾರ್ಚ್ 13 : ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ವಿರುದ್ಧದ ರಷ್ಯಾದ ಮಿಲಿಟರಿ ಕ್ರಮವನ್ನು ಬಲವಾಗಿ ಖಂಡಿಸುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತೊಮ್ಮೆ ಈ ಬಗ್ಗೆ ಪ್ರತಿಕ್ರಿಯಿಸಿದೆ. ರಷ್ಯಾದ ತೈಲ ಮತ್ತು ಅನಿಲ ಉತ್ಪನ್ನಗಳ ಮೇಲೆ ನಿರ್ಬಂಧಗಳನ್ನು ಘೋಷಿಸಿದೆ. ರಷ್ಯಾದಿಂದ ಈ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ.

ಈ ವಿಚಾರವನ್ನ ಯುಎಸ್ ಅಧ್ಯಕ್ಷ ಜೋಬೈಡೆನ್ ಘೋಷಿಸಿದ್ದಾರೆ. ರಷ್ಯಾದಿಂದ ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು $ 1 ಬಿಲಿಯನ್ ತಲುಪಿದೆ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಹೇಳಿದ್ದಾರೆ.

“ಭವಿಷ್ಯದಲ್ಲಿ ರಷ್ಯಾದ ಅನಿಲ ಮತ್ತು ತೈಲ ವಲಯದಲ್ಲಿ ಭಾರತದಿಂದ ಹೆಚ್ಚಿನ ಹೂಡಿಕೆಯನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದರು. ರಷ್ಯಾದಿಂದ ರಫ್ತು ಮಾಡುವ ಸರಕುಗಳ ಮೇಲೆ ಯುರೋಪಿಯನ್ ರಾಷ್ಟ್ರಗಳು ಸಹ ಈಗಾಗಲೇ ವಿವಿಧ ನಿರ್ಬಂಧಗಳನ್ನು ವಿಧಿಸಿರುವುದು ಗೊತ್ತಿರುವ ವಿಚಾರವೆ.

ಸುದ್ದಿ ಓದಿ