ಅಂತರರಾಷ್ಟ್ರೀಯ

ಭವಿಷ್ಯದಲ್ಲಿ ಭಾರತ, ಚೀನಾಗೆ ಎಸ್-500 ಕ್ಷಿಪಣಿ ರಫ್ತಿಗೆ ರಷ್ಯಾ ಚಿಂತನೆ

ಭವಿಷ್ಯದಲ್ಲಿ ಭಾರತ, ಚೀನಾಗೆ ಎಸ್-500 ಕ್ಷಿಪಣಿ ರಫ್ತಿಗೆ ರಷ್ಯಾ ಚಿಂತನೆ

ಮಾಸ್ಕೋ, ನ. 02: ರಷ್ಯಾ ಭವಿಷ್ಯದಲ್ಲಿ ಭಾರತ ಮತ್ತು ಚೀನಾಕ್ಕೆ ತನ್ನ ಅತ್ಯಾಧುನಿಕ ಎಸ್-500 ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಗಳನ್ನು ಪೂರೈಸಲಿದೆ ಎಂದು ಮಿಲಿಟರಿ-ತಾಂತ್ರಿಕ ಸಹಕಾರಕ್ಕಾಗಿನ ರಷ್ಯಾದ ಫೆಡರಲ್ ಸೇವೆಯ ನಿರ್ದೇಶಕ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.

ದೇಶದ ಸೇನೆಯು ಶೀಘ್ರದಲ್ಲೇ ಮೊದಲ ಬ್ಯಾಚ್-ಉತ್ಪಾದಿತಎಸ್-500 ಕ್ಷಿಪಣಿ ವ್ಯವಸ್ಥೆಯನ್ನು ಪಡೆಯಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಹೇಳಿದ್ದಾರೆ.

ದೇಶದ ರಾಷ್ಟ್ರೀಯ ಸಶಸ್ತ್ರ ಪಡೆಗಳಿಗೆ ಸಾಕಾಗುಷ್ಟು ಎಸ್ 500  ವ್ಯವಸ್ಥೆಗಳನ್ನು ಒದಗಿಸಿದ ನಂತರ, ಅವುಗಳನ್ನು ಇತರ ದೇಶಗಳಿಗೆ ರಫ್ತು ಮಾಡಬಹುದಾಗಿದೆ ಎಂದು ಶುಗೇವ್ ಹೇಳಿದ್ದಾರೆ. 

ಎಸ್-500 ಮುಂದಿನ ಪೀಳಿಗೆಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಸುಮಾರು 600 ಕಿಲೋಮೀಟರ್  ವ್ಯಾಪ್ತಿಯಲ್ಲಿ  ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ವಿಮಾನಗಳನ್ನೂ ಸಹ ನಾಶಗೊಳಿಸುವ ಶಕ್ತಿಯನ್ನು ಎಸ್-500 ಹೊಂದಿದೆ.

ಸುದ್ದಿ ಓದಿ