ಅಂತರರಾಷ್ಟ್ರೀಯ

ಉಕ್ರೇನ್ ರಾಜಧಾನಿ ಕಿವ್ ವಶಪಡಿಸಿಕೊಂಡ ರಷ್ಯಾ

ಉಕ್ರೇನ್ ರಾಜಧಾನಿ ಕಿವ್ ವಶಪಡಿಸಿಕೊಂಡ ರಷ್ಯಾ

ಕಿವ್: ಫೆಬ್ರವರಿ 26: ಮಿಲಿಟರಿ ಕಾರ್ಯಾಚರಣೆ ಎಂದು ಹೇಳಿ ಉಕ್ರೇನ್ ಮೇಲಿನ ದಾಳಿನಡೆಸಿದ ರಷ್ಯಾ, ಉಕ್ರೇನ್ ನಾಶಕ್ಕೆ  ಸಿದ್ದವಾಗಿದೆ. ಪೂರ್ವ ಉಕ್ರೇನ್‌ಗೆ ಸೀಮಿತವಾಗಿರುವ ರಷ್ಯಾದ ಪಡೆಗಳು ಶುಕ್ರವಾರ ರಾಜಧಾನಿ ಕೀವ್‌ಗೆ ಪ್ರವೇಶಿಸಿದವು. ಯುದ್ಧ ಟ್ಯಾಂಕ್‌ಗಳು ಜನವಾಸಸ್ಥಳಗಳ ಬೀದಿಗಳಲ್ಲಿ ಸಂಚರಿಸಿದವು. ಸೈನಿಕರ ಪರೇಡ್‌ಗಳು ಮತ್ತು ಯುದ್ಧವಿಮಾನದ ಹಾರಾಟಗಳಿಂದ ಇಡೀ ನಗರವ ರಣರಂಗವಾಗಿ ಕಂಡಿದೆ.

 ಕೆಲವು ಪ್ರದೇಶಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ಸದ್ದುಗಳು ಕೇಳಿಬಂದವು. ಬದುಕುಳಿದವರು ಮೆಟ್ರೋ ಅಂಡರ್‌ಗ್ರೌಂಡ್ ಪಾಸ್, ಸುರಂಗಮಾರ್ಗ ಮತ್ತು ಬಂಕರ್‌ಗಳಲ್ಲಿ ಅಡಗಿಕೊಂಡರು. ನಗರದ ಹೊರಗಿರುವ ಹೊರಭಾಗದ ವಿಮಾನ ನಿಲ್ದಾಣವನ್ನು ತನ್ನ ಅಧೀನಕ್ಕೆ ಪಡೆದಿರುವುದಾಗಿ ರಷ್ಯಾ ಘೋಷಿಸಿದೆ.

ರಷ್ಯಾದ ಆಕ್ರಮಣವನ್ನು ತಡೆಯಲು ಉಕ್ರೇನಿಯನ್ ಪಡೆಗಳು ಶ್ರಮಿಸುತ್ತಿವೆ. ಶತ್ರುಗಳು ಪ್ರಮುಖ ನಗರಗಳನ್ನು ಪ್ರವೇಶಿಸದಂತೆ ತಡೆಯಲು ಪ್ರತಿದಾಳಿ ನಡೆಸುತ್ತಿದೆ. ಯುದ್ಧದಲ್ಲಿ ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ.

ರಷ್ಯಾದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ. ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ, ಶಾಂತಿಯುತ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿ ಸಾಮಾನ್ಉ ಜನರನ್ನ ಕೊಲ್ಲುತ್ತಿರುವ ರಷ್ಯಾ, ಈ ತಪ್ಪನ್ನು ಮಾಡಿದ ರಷ್ಯಾವನ್ನ ಆ ದೇಶ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರಾಜಧಾನಿ ಕಿವ್ ನಂತರ ರಷ್ಯಾ ಪಡೆಗಳು ಖಾರ್ಕಿವ್‌ನಂತಹ ನಗರಗಳನ್ನು ಪ್ರವೇಶಿಸಿವೆ ಎಂಬ ಮಾಹಿತಿ. ಉಕ್ರೇನ್‌ನ 118 ಸೇನಾ ನೆಲೆಗಳನ್ನು ನಾಶಪಡಿಸಿರುವುದಾಗಿ ರಷ್ಯಾ ಹೇಳಿದೆ.

ಸುದ್ದಿ ಓದಿ