ರಷ್ಯಾ-ಉಕ್ರೇನ್ ಯುದ್ದ: ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ಸೇವೆ ಸ್ಥಗಿತ
ರಷ್ಯಾ: ಮಾರ್ಚ್ 07: ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಷ್ಯಾಕ್ಕೆ ಇನ್ನೂ ಹೊಡೆತ ಬೀಳುತ್ತಲೇ ಇದೆ. ನೆಟ್‌ಫ್ಲಿಕ್ಸ್ ಮತ್ತು ಟಿಕ್‌ಟಾಕ್ ಇತ್ತೀಚೆಗೆ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನಾವು ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ. ಈ ನಿರ್ಧಾರವು ನಿರ್ಬಂಧಗಳ ಭಾಗವಾಗಿದೆ ಎಂದು ತಿಳಿಸಿದೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್ ರಷ್ಯಾದ ನಕಲಿ ಕಾನೂನನ್ನು ವಿರೋಧಿಸುವುದಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಹೊಂದಿದ್ದೂ ಹೊಸ ಬಳಕೆದಾರರಿಗೆ ಅನುಮತಿಗಳನ್ನು ನಿಷೇಧಿಸಿದೆ ನೆಟ್‌ಫ್ಲಿಕ್ಸ್, ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆಯ ನೀಡುವ ಬಗ್ಗೆ ಸ್ಪಷ್ಟಪಡಿಸಿಲ್ಲ.
ಟಿಕ್ ಟಾಕ್ ರಷ್ಯಾದಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ಇತರ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಉಕ್ರೇನ್‌ನ ದಾಳಿಯ ಸಂದರ್ಭದಲ್ಲಿ ನಕಲಿ ಸುದ್ದಿ ಪ್ರಸಾರದ ಹೆಸರಿನಲ್ಲಿ ರಷ್ಯಾ ಬಲವಂತದ ಕಾನೂನುಗಳು ಮತ್ತು ಕಠಿಣ ಶಿಕ್ಷೆಗಳನ್ನು ವಿಧಿಸಿತ್ತು.ಇದನ್ನ ವಿರೋಧಿಸಿ ಪ್ರತಿಭಟನೆಯಲ್ಲಿ ಟಿಕ್ ಟಾಕ್ ಈ ನಿರ್ಧಾರ ತೆಗೆದುಕೊಂಡಿದೆ.