ರಷ್ಯಾ: ಒಂದೇ ದಿನ 40,759 ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ನವೆಂಬರ್ 11 ಕಳೆದ 24 ಗಂಟೆಗಳಲ್ಲಿ ರಷ್ಯಾ 40,759 ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು 8,952,472 ಕ್ಕೆ ಏರಿಕೆಯಾಗಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರವು ಗುರುವಾರ ತಿಳಿಸಿದೆ.
"ಕಳೆದ ದಿನದಲ್ಲಿ, ಕ್ಲಿನಿಕಲ್ ರೋಗಲಕ್ಷಣಗಳಿಲ್ಲದೆ 3,494 ಪ್ರಕರಣಗಳು ಸೇರಿದಂತೆ 85 ರಷ್ಯಾದ ಪ್ರದೇಶಗಳಲ್ಲಿ 40,759 ಕೋವಿಡ್ ಪ್ರಕರಣಗಳನ್ನು ದೃಢಪಡಿಸಲಾಗಿದೆ" ಎಂದು ಕೇಂದ್ರವು ಹೇಳಿದೆ.
ಕಳೆದ 24 ಗಂಟೆಗಳಲ್ಲಿ 1,237 ಮಂದಿ ಮೃತಪಟ್ಟಿದ್ದು, ದೇಶದ ಸಾವಿನ ಸಂಖ್ಯೆಯನ್ನು 251,691ಕ್ಕೆ ತಲುಪಿದೆ.
ಇದೇ ಅವಧಿಯಲ್ಲಿ ದೇಶಾದ್ಯಂತ 33,156 ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಗುಣಮುಖರಾದವರ ಸಂಖ್ಯೆ ಒಟ್ಟು 7,687,317 ರಷ್ಟಿದೆ.