ರಷ್ಯಾ : ಒಂದೇ ದಿನ 37,930 ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ಅ. 25 ಕಳೆದ 24 ಗಂಟೆಗಳಲ್ಲಿ ರಷ್ಯಾ 37,930 ಕೋವಿಡ್ -19 ಪ್ರಕರಣಗಳ ಹೊಸ ಏಕದಿನ ದಾಖಲೆಯನ್ನು ದಾಖಲಿಸಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 8,279,573 ಕ್ಕೆ ತಲುಪಿದೆ ಎಂದು ಪ್ರತಿಕ್ರಿಯೆ ಕೇಂದ್ರ ಸೋಮವಾರ ಹೇಳಿದೆ.
"ಕಳೆದ ದಿನದಲ್ಲಿ, ಕ್ಲಿನಿಕಲ್ ರೋಗಲಕ್ಷಣಗಳಿಲ್ಲದೆ 3,387 ಪ್ರಕರಣಗಳು ಸೇರಿದಂತೆ 85 ರಷ್ಯಾದ ಪ್ರದೇಶಗಳಲ್ಲಿ 37,930 ಕೋವಿಡ್ -19 ಪ್ರಕರಣಗಳನ್ನು ದೃಢಪಡಿಸಲಾಗಿದೆ" ಎಂದು ಕೇಂದ್ರವು ಹೇಳಿದೆ
ಮಾಸ್ಕೋ 7,778, ಸೇಂಟ್ ಪೀಟರ್ಸ್‌ಬರ್ಗ್ 3,127 ಪ್ರಕರಣ ದಾಖಲಿಸಿದೆ. ಏತನ್ಮಧ್ಯೆ ಕಳೆದ 24 ಗಂಟೆಗಳಲ್ಲಿ 1,069 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಒಟ್ಟು ಸಂಖ್ಯೆ 231,669 ಕ್ಕೆ ತಲುಪಿದೆ.
ಅದೇ 24 ಗಂಟೆಗಳಲ್ಲಿ, 20,690 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 7,186,611ರಷ್ಟಿದೆ.