ಅಂತರರಾಷ್ಟ್ರೀಯ

ರಷ್ಯಾ : ಒಂದೇ ದಿನ 36,339 ಕೋವಿಡ್ ಪ್ರಕರಣ ದಾಖಲು

ರಷ್ಯಾ : ಒಂದೇ ದಿನ 36,339 ಕೋವಿಡ್ ಪ್ರಕರಣ ದಾಖಲು

  ಮಾಸ್ಕೋ, ಅ. 21  ರಷ್ಯಾ ಕಳೆದ 24 ಗಂಟೆಗಳಲ್ಲಿ 36,339 ಹೊಸ ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು,  ಒಟ್ಟು ಮೊತ್ತ 8,131,164 ಕ್ಕೆ ಏರಿಕೆಯಾಗಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ಹೇಳಿದೆ.
 
ಮಾಸ್ಕೋ 7,897,  ಸೇಂಟ್ ಪೀಟರ್ಸ್ಬರ್ಗ್ 3,280 ಪ್ರಕರಣಗಳನ್ನು ಹೊಂದಿವೆ.  
 
ಕಳೆದ 24 ಗಂಟೆಗಳಲ್ಲಿ 1,036 ಸೋಂಕಿತರು ಮೃತರಾಗಿದ್ದು,  ದೇಶದ ಸಾವಿನ ಸಂಖ್ಯೆ 227,389 ಕ್ಕೆ ತಲುಪಿದೆ. 25,895 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯೆ ಕೇಂದ್ರವು ಮಾಹಿತಿ ನೀಡಿದೆ.
 

ಸುದ್ದಿ ಓದಿ