ರಷ್ಯಾ: ಕಳೆದ 24 ಗಂಟೆಗಳಲ್ಲಿ 34,073 ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ಅ. 20 ರಷ್ಯಾ ಕಳೆದ 24 ಗಂಟೆಗಳಲ್ಲಿ 34,073 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 8,094,825 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ತಿಳಿಸಿದೆ.
"ಕಳೆದ ಒಂದೇ ದಿನ, 34,073 ಕೋವಿಡ್ 19 ಪ್ರಕರಣಗಳು ರಷ್ಯಾದ 85 ಪ್ರದೇಶಗಳಲ್ಲಿ ದೃಢಪಟ್ಟಿವೆ, ಇದರಲ್ಲಿ ಕ್ಲಿನಿಕಲ್ ಲಕ್ಷಣಗಳಿಲ್ಲದೆ 3,067 ಪ್ರಕರಣಗಳು ಸೇರಿವೆ" ಎಂದು ಪ್ರತಿಕ್ರಿಯೆ ಕೇಂದ್ರವು ಹೇಳಿದೆ.
ಕೊರೋನಾ ಸೋಂಕಿನಿಂದಾಗಿ ಕಳೆದ ಒಂದೇ ದಿನ 1,028 ಮೃತರಾಗಿದ್ದು, ಸಾವಿನ ಒಟ್ಟು ಸಂಖ್ಯೆ 226,353 ಕ್ಕೆ ತಲುಪಿದೆ.
ಅದೇ 24 ಗಂಟೆಗಳಲ್ಲಿ, 25,231 ಕೋವಿಡ್ -19 ರೋಗಿಗಳು ಗುಣಮುಖರಾಗಿ ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 7,065,712 ಕ್ಕೆ ತಲುಪಿದೆ.