ರಷ್ಯಾ: ಒಂದೇ ದಿನ 33,946 ಹೊಸ ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ನ. 07: ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಮತ್ತೆ ಆರ್ಭಟಿಸಲಾರಂಭಿಸಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾ 33,946 ಹೊಸ ಕೋವಿಡ್ 19 ಪ್ರಕರಣಗಳನ್ನು ದೃಢಪಡಿಸಿದ್ದು, ಒಟ್ಟು 9,536,825 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ತಿಳಿಸಿದೆ.
"ಕಳೆದ 24 ಗಂಟೆಗಳಲ್ಲಿ, ರಷ್ಯಾದ 85 ಪ್ರದೇಶಗಳಲ್ಲಿ 33,946 ಕೋವಿಡ್ 19 ಪ್ರಕರಣಗಳು ದೃಢೀಕರಿಸಲ್ಪಟ್ಟಿವೆ, ಇದರಲ್ಲಿ ಕ್ಲಿನಿಕಲ್ ರೋಗಲಕ್ಷಣಗಳಿಲ್ಲದ 2,269 ಪ್ರಕರಣಗಳು ಸೇರಿವೆ" ಎಂದು ಕೇಂದ್ರವು ಹೇಳಿದೆ.
ಪ್ರತಿಕ್ರಿಯೆ ಕೇಂದ್ರವು ಕೊರೋನಾ ವೈರಸ್‌ಗೆ ಸಂಬಂಧಿಸಿದ 1,239 ಸಾವುಗಳನ್ನು ವರದಿ ಮಾಡಿದ್ದು, ಇದು ದೇಶದ ಸಾವಿನ ಸಂಖ್ಯೆಯನ್ನು 271,531 ಕ್ಕೆ ತಲುಪಿಸಿದೆ.
ಅದೇ 24 ಗಂಟೆಗಳಲ್ಲಿ, ದೇಶಾದ್ಯಂತ 36,494 ಕೋವಿಡ್ -19 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 8,237,465ರಷ್ಟಿದೆ.