ರಷ್ಯಾ: ಕಳೆದ 24 ಗಂಟೆಗಳಲ್ಲಿ 32,648 ಹೊಸ ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ನ. 30 ಕಳೆದ 24 ಗಂಟೆಗಳಲ್ಲಿ ರಷ್ಯಾ 32,648 ಹೊಸ ಕೋವಿಡ್-19 ಪ್ರಕರಣಗಳನ್ನು ದೃಢಪಡಿಸಿದ್ದು, ಒಟ್ಟು 9,636,881 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ಮಂಗಳವಾರ ತಿಳಿಸಿದೆ.
"ಕಳೆದ 24 ಗಂಟೆಗಳಲ್ಲಿ, ಕ್ಲಿನಿಕಲ್ ರೋಗಲಕ್ಷಣಗಳಿಲ್ಲದೆ 2,247 ಪ್ರಕರಣಗಳು ಸೇರಿದಂತೆ ರಷ್ಯಾದ 85 ಪ್ರದೇಶಗಳಲ್ಲಿ 32,648 ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ" ಎಂದು ಕೇಂದ್ರವು ಹೇಳಿದೆ.
ಏತನ್ಮಧ್ಯೆ ಕಳೆದ ದಿನ 1,229 ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಸಾವಿನ ಒಟ್ಟು ಸಂಖ್ಯೆ 275,193 ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ, ದೇಶಾದ್ಯಂತ 33,442 ಕೋವಿಡ್ -19 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 8,329,253ರಷ್ಟಿದೆ.