ಇರಾಕಿ-ಕುವೈತ್ ಗಡಿಯ ಅಮೆರಿಕ ಸೇನಾ ನೆಲೆಯಲ್ಲಿ ರಾಕೆಟ್ ದಾಳಿ
ಬಾಗ್ದಾದ್, ಆಗಸ್ಟ್ 28: ಇರಾಕಿ-ಕುವೈತ್ ಗಡಿಯಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ರಾಕೆಟ್ ದಾಳಿ ನಡೆದಿದೆ, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಮೂಲಗಳು ಶನಿವಾರ ತಿಳಿಸಿವೆ.
"ಅಜ್ಞಾತ ಉಗ್ರರು ಕುವೈತ್ ನ ಗಡಿ ಬಳಿಯ ಜೆರಿಶನ್ ಗಡಿ ಬಳಿಯಿರುವ ಅಮೆರಿಕ ಸೇನಾ ನೆಲೆಯ ಮೇಲೆ ಮೂರು ರಾಕೆಟ್ ಗಳನ್ನು ಹಾರಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಕೆಟ್ ಗಳು ನೆಲೆಯಿಂದ ಸ್ವಲ್ಪ ದೂರದಲ್ಲಿ ಬಿದ್ದಿವೆ, ಯಾವುದೇ ನಷ್ಟವಾಗಿಲ್ಲ" ಎಂದು ಮೂಲಗಳು ತಿಳಿಸಿವೆ.
ಇರಾಕ್‌ನಲ್ಲಿನ ವಿದೇಶಿ ಸೇನಾ ನೆಲೆಗಳು ಹೆಚ್ಚಾಗಿ ಶಿಯಾ ಗುಂಪುಗಳಿಂದ ರಾಕೆಟ್ ದಾಳಿಗೆ ಗುರಿಯಾಗುತ್ತಿದೆ.