ಸಂವಿಧಾನವನ್ನು ಗೌರವಿಸಿ: ಜಿ.ಎ.ಸುಣಗಾರ
ಸವದತ್ತಿ 26: ಮಕ್ಕಳಲ್ಲಿ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಅರಿವಿರಬೇಕು. ಭಾರತದ ಸಂವಿಧಾನ ಬಗ್ಗೆ ಗೌರವ ಭಾವನೆ ಇರಬೇಕೆಂದು ಪ್ರಧಾನ ಗುರುಗಳಾದ ಜಿ.ಎ.ಸುಣಗಾರ ಹೇಳಿದರು.ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಮಕ್ಕಳು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡಿದರು. ಶಿಕ್ಷಕರಾದ ಎಂ.ಎ.ಹುದ್ಲಿ, ಎಸ್.ಎಂ.ಸಂಗೊಳ್ಳಿ, ಎಸ್.ಆಯ್.ಹಂಚಿನಮನಿ, ಎ.ಜಿ.ಕಮತಗಿ, ಎಸ್.ಜಿ.ಸುಣಗಾರ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎನ್ ಅಂಗಡಿ ನಿರೂಪಿಸಿದರು. ಎಸ್.ಎನ್.ಗೋಂಧಳಿ ವಂದಿಸಿದರು.