ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಮುಂದಿನ ಮಕ್ಕಳಿಗೆ ಪ್ರೇರಣೆ : ಪಾಟೀಲ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಮುಂದಿನ ಮಕ್ಕಳಿಗೆ ಪ್ರೇರಣೆ : ಪಾಟೀಲ Respect for talented students is an inspiration to future children: Patil

ಲೋಕದರ್ಶನ ವರದಿ 

      ಸಿಂದಗಿ 31: ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಸಮಾಜದ ಕಾರ್ಯ ಮುಂದಿನ ಮಕ್ಕಳಿಗೆ ಪ್ರೇರಣೆ ನೀಡಿದಂತಾಗಿದಲ್ಲದೆ ಜಿಲ್ಲೆಗೆ ಒಳ್ಳೆಯ ಸಂದೇಶವಾಗಿದೆ. ಸಮಾಜದ ಕಾರ್ಯಕ್ರಮವಿದ್ದಾಗ ರಾಜಕಾರಣ ದೂರವಿಟ್ಟು ಸಮಾಜಕ್ಕಾಗಿ ಶ್ರಮಿಸೋಣ ಎಂದು ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಬಿ. ಪಾಟೀಲ ಹೇಳಿದರು.  

       ಪಟ್ಟಣದ ಆಶೀರ್ವಾದ  ಕಲ್ಯಾಣ ಮಂಟಪದಲ್ಲಿ  ಅಖಂಡ  ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ 2025-26 ಸಾಲಿನ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,ಇಡೀ ಜಗತ್ತಿಗೆ ಮಾದರಿಯಾಗಿರುವ ವೀರವನಿತೆ ಚನ್ನಮ್ಮಾಜಿ ಅವರು ಈ ದೇಶದ ಸಲುವಾಗಿ ಬದುಕಿದಂತವರು ಅಂತವರ ದೈರ್ಯ, ಶೂರುತನ ಮತ್ತು ತತ್ವಾದರ್ಶಗಳು ನಮ್ಮ ಮಕ್ಕಳಲ್ಲಿ ಹರಿದು ಬರಬೇಕು. ಅಲ್ಲದೆ ಎಲ್ಲ ಸಮಾಜಗಳ ಜೊತೆ ಪ್ರೀತಿಯಿಂದ ಅನ್ಯೂನತೆ ಬೆರೆತು ನಡೆಯುವ ಪಂಚಮಸಾಲಿ ಸಮಾಜವಾಗಿದೆ ಎಂದರು.   

         ದಿವ್ಯ ಸಾನಿಧ್ಯ ವಹಿಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಪೂಜ್ಯಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದಲ್ಲಿ ಯಾವುದೆ ಸರಕಾರ ಆಡಳಿತಕ್ಕೆ ಬಂದರೂ ಕೂಡಾ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ನಡೆಸುತ್ತಿರುವ 2ಎ ಮಿಸಲಾತಿ ಹೋರಾಟ ಹತ್ತಿಕ್ಕಲು ನನ್ನ ಮೇಲೆ ಇಲ್ಲಸಲ್ಲದ ಆರೋಪ ನಡೆಯುತ್ತಿವೆ ಆದರೆ ಮಿಸಲಾತಿ  ಸಿಗುವವರೆಗೂ ನಿಲ್ಲದು ಸಮಾಜದ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.   ವಿಶೇಷ ಸನ್ಮಾನ ಸ್ವೀಕರಿಸಿದ ಕಲಬುರಗಿ ಡೆಪ್ಯೂಟಿ ಕಮಾಂಡೆಂಟ್ ಶರಣಬಸು ಕೊಳಾರಿ ಮಾತನಾಡಿದರು. 

      ಅರ್ಜುಣಗಿ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ. ಸವಿತಾ ಝಳಕಿ ಉಪನ್ಯಾಸ ನೀಡಿ, ಜ್ಞಾನ ಪವಿತ್ರವಾದದ್ದು ಅದನ್ನು ಪೂರಕವಾಗಿ ಪಡೆದುಕೊಂಡು ಸಮಾಜದಲ್ಲಿ ಇತಿಹಾಸ ಸೃಷ್ಟಿಸಬೇಕು. ಸದೃಢ ದೇಹ ಮತ್ತು ಸೌಠರ್ಯವನ್ನು ಗೆಲ್ಲುವ ಶಕ್ತಿ ಶಿಕ್ಷಣಕ್ಕಿದೆ ಕಾರಣ ಸಾಧನೆಯ ಹಾದಿಯನ್ನು ಮುದ್ದಿಕೊಂಡು ಶ್ರದ್ದಾ ಭಕ್ತಿಯಿಂದ ಓದಿನ ಕೆಡೆ ಹೆಚ್ಚು ಲಕ್ಷವಿಟ್ಟು ಮುಂದಿನ ಪಿಳಿಗ್ಗೆ ತಮ್ನ ಸಾಧನೆಯನ್ನು ದಾರೆ ಎರೆಯುವವ ಕಾರ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.