ಅಂತರರಾಷ್ಟ್ರೀಯ

ಭಾರತ ಬಗ್ಗೆ ಅಸಮಧಾನ.. ಚೀನಾ ವನ್ನು ಅಟ್ಟಕೇರಿಸುತ್ತಿರವ ಅಲನ್‌ ಮಸ್ಕ್‌

ಭಾರತ  ಬಗ್ಗೆ   ಅಸಮಧಾನ.. ಚೀನಾ ವನ್ನು ಅಟ್ಟಕೇರಿಸುತ್ತಿರವ  ಅಲನ್‌ ಮಸ್ಕ್‌

ನವದೆಹಲಿ, ಸೆ  27:  ತನ್ನ    ಕಾರುಗಳ  ಉದ್ಯಮ    ಭಾರತ    ಪ್ರವೇಶಿಸುವ     ಮಾರ್ಗಗಳು  ಕಿರಿದಾಗುತ್ತಿರುವ   ಹಿನ್ನಲೆಯಲ್ಲಿ  .. ಟೆಸ್ಲಾ ಸಿಇಓ ಅಲನ್ ಮಸ್ಕ್  ತೀವ್ರ  ಅಸಹನೆಗೆ ಒಳಗಾಗುತ್ತಿದ್ದಾರೆ.     ಈ  ಕ್ರಮವಾಗಿ    ಅವರು    ನೀಡುತ್ತಿರುವ   ಇತ್ತೀಚಿನ    ಹೇಳಿಕೆಗಳು   ತೀವ್ರ    ಆಸಕ್ತಿ ಕೆರಳಿಸುತ್ತಿವೆ.    ಭಾರತದ    ಮೇಲಿನ   ತಮ್ಮ  ಕೋಪವನ್ನು     ತಣಿಸಿಕೊಳ್ಳಲು    ಚೀನಾವನ್ನು ಅಟ್ಟಕೇರಿಸುವಂತಿದೆ.   ಕಳೆದ ಹತ್ತು ದಿನಗಳಲ್ಲಿ ಈ ರೀತಿ    ಎರಡು  ಬಾರಿ   ಅವರು  ಹೇಳಿಕೆ    ನೀಡಿರುವುದು   ವಿಶೇಷವಾಗಿದೆ.

ಚೀನಾದ   ಸೈಬರ್‌ ಸ್ಪೇಸ್ ಆಡಳಿತ     ಆಯೋಜಿಸಿದ್ದ   ವಿಶ್ವ ಅಂತರ್ಜಾಲ ಸಮ್ಮೇಳನದಲ್ಲಿ   ಟೆಸ್ಲಾ ಮುಖ್ಯಸ್ಥ ಅಲನ್ ಮಸ್ಕ್  ನೀಡಿದ್ದ   ಧ್ವನಿ ಸಂದೇಶದಲ್ಲಿ    ಮಸ್ಕ್.. ಮುಂದಿನ ದಿನಗಳಲ್ಲಿ ಚೀನಾದಲ್ಲಿ  ಟೆಸ್ಲಾ ತನ್ನ ಕಾರ್ಯಾಚರಣೆ   ಮತ್ತಷ್ಟು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. " ನಿಜ    ಹೇಳಬೇಕೆಂದರೆ    ಸಂಪನ್ಮೂಲಗಳಿಗಾಗಿ  ಚೀನಾ ಹೆಚ್ಚು ಖರ್ಚು ಮಾಡುತ್ತಿದೆ.  ಡಿಜಿಟಲ್ ತಂತ್ರಜ್ಞಾನವನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಅದರಲ್ಲಿ ಆಟೋಮೊಬೈಲ್‌ಗೆ ಆದ್ಯತೆ ನೀಡುವ ಮೂಲಕ ಚೀನಾ ಡಿಜಿಟಲೀಕರಣದ  ನಾಯಕನಾಗಿ  ಹೊರಹೊಮ್ಮುತ್ತಿದೆ.   ಈ  ವಿಷಯದಲ್ಲಿ  ಏಷ್ಯಾದಲ್ಲಿಯೇ   ತಂತ್ರಜ್ಞಾನ   ಹೆಚ್ಚು ಬಳಸಿಕೊಳ್ಳಲಾಗುತ್ತಿದೆ  ಎಂದು  ಹೇಳಿಕೊಳ್ಳುವ   ದೊಡ್ಡ ದೇಶ   ಹಿಂದೆ  ಬಿದ್ದಿದೆ   ಎಂದು ಮಸ್ಕ್‌    ಹೇಳಿದ್ದಾರೆ.

ಭಾರತವನ್ನು ಉದ್ದೇಶಿಸಿಯೇ? 

ಎಲಾನ್ ಮಸ್ಕ್   ನೀಡಿದ   ಹೇಳಿಕೆಗಳು   ಪರೋಕ್ಷವಾಗಿ ಭಾರತ   ಉದ್ದೇಶಿಸಿರಬಹುದು ಎಂದು  ತಜ್ಞರು  ವಿಶ್ಲೇಷಿಸಿದ್ದಾರೆ.   ಟೆಸ್ಲಾ ಭಾರತಕ್ಕೆ ಪ್ರವೇಶಿಸಲು ಅಲನ್ ಮಸ್ಕ್  ವಿಪರೀತ  ಪ್ರಯತ್ನ  ಮಾಡುತ್ತಿದ್ದಾರೆ.  ಆದರೆ, ಆ ಪ್ರಯತ್ನಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿಲ್ಲ.   ಚೀನಾದಲ್ಲಿ  ಮತ್ತಷ್ಟು  ಹೂಡಿಕೆ  ಹೆಚ್ಚಿಸುವ  ಮೂಲಕ ಭಾರತವನ್ನು ಕೆರಳಿಸಲು   ಅಲನ್ ಮಸ್ಕ್  ಬಯಸಿದಂತಿದೆ.   ಇನ್ನೂ ಭಾರತದಲ್ಲಿ  ಟೆಸ್ಲಾ ಪ್ರವೇಶಿಸಲು  ಸುಂಕ ಕಡಿತದ ಮನವಿಯೊಂದಿಗೆ ಆರಂಭಗೊಂಡ  ಚರ್ಚೆ  ಹಲವಾರು ಸುತ್ತಿನಲ್ಲಿ  ನಡೆಯುತ್ತಲೇ ಇದೆ. ತನ್ನದೇ ಆದ ಶೋರೂಂಗಳ ಜೊತೆಗೆ  ಆನ್‌ಲೈನ್‌ನಲ್ಲಿ ಮಾರಾಟ ಮುಂದುವರಿಸಲು ಬಯಸಿದೆ.   ನಾಲ್ಕು ಮಾದರಿಗಳ ಕಾರುಗಳೊಂದಿಗೆ ಭಾರತ ಪ್ರವೇಶಿಸುವುದನ್ನು  ಬಹುತೇಕ ಅಂತಿಮಗೊಳಿಸಿದೆ ಎಂದು ಟೆಸ್ಲಾ  ಹೇಳಿಕೆ ನೀಡಿಕೊಂಡುಬರುತ್ತಿದೆ.  ಈ ನಡುವೆ  ಕೇಂದ್ರ ಸರ್ಕಾರ  ಮತ್ತೊಂದು  ನಿರ್ಧಾರ ಕೈಗೊಂಡು,    'ಮೇಕ್ ಇನ್ ಇಂಡಿಯಾ'ದ ಮೇಲೆ ಕೇಂದ್ರೀಕರಿಸುವಂತೆ,     ಮುಂದಿನ ದಿನಗಳಲ್ಲಿ  ಟೆಸ್ಲಾ ಭಾರತದಲ್ಲಿ  ನಿರ್ಮಿಸಲಿರುವ  ಕಾರ್ಖಾನೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಟೆಸ್ಲಾವನ್ನು  ಕೋರಿದೆ.  ಇದರಿಂದ  ಟೆಸ್ಲಾ   ಭಾರತ  ಪ್ರವೇಶದಿಂದ  ಹಿಂದಕ್ಕೆ ಸರಿದಿದೆ  ಎಂದು  ತಿಳಿದುಬಂದಿದೆ.

ಸುದ್ದಿ ಓದಿ