ರಬಾಕಾವಿಬನಹಟ್ಟಿ

ಅಪ್ಪು ರಾವಳಗೆ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಶಾಸಕರಿಗೆ ಮನವಿ

ಅಪ್ಪು ರಾವಳಗೆ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಶಾಸಕರಿಗೆ ಮನವಿ

ರಬಕವಿ-ಬನಹಟ್ಟಿ 24: ತಾಲೂಕಿನಲ್ಲಿ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಬಿಜೆಪಿಗೆ 25 ವರ್ಷ ಕಾಲ ಶ್ರಮಿಸಿರುವ ಬನಹಟ್ಟಿಯ ಪರಶುರಾಮ(ಅಪ್ಪು) ಲಕ್ಷ್ಮಣ ರಾವಳ ಅವರಿಗೆ ರಬಕವಿ-ಬನಹಟ್ಟಿ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಬೇಕೆಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. 

ಅಖಂಡ ಜಮಖಂಡಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆಗೆ 1995 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪ್ರಥಮ ಬಿಜೆಪಿ ನಗರಸಭಾ ಸದಸ್ಯರಾಗಿದ್ದ ಲಕ್ಷ್ಮಣ ರಾವಳರ ಪುತ್ರ ಪರಶುರಾಮ (ಅಪ್ಪು) ರಾವಳ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಬಿಜೆಪಿ ಬೆಳವಣಿಗೆಯಲ್ಲಿ ಶ್ರಮಿಸಿದ್ದು, ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದು, ಅವರ ಇಡಿ ಕುಟುಂಬ ಬಿಜೆಪಿ ಕುಟುಂಬವಾಗಿದೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಬಿಜೆಪಿ ನಿಷ್ಟಾವಂತ ಕಾರ್ಯಕರ್ತನಿಗೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಬೇಕೆಂದು ಶಾಸಕರಿಗೆ ಮನವಿ ಅರ​‍್ಿಸಿದ್ದಾರೆ. 

ಗ್ರಾಮೀಣ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ ಅಕ್ಕಿವಾಟ, ಪರಶುರಾಮ (ಅಪ್ಪು) ರಾವಳ, ದೇವೆಂದ್ರ ಬುದ್ನಿ, ಮಹಾದೇವ ಗೊಂಬಿಗುಡ್ಡ, ರಮೇಶ ಮುಂಡಗನೂರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ