ಮುಂಡರಗಿ

ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಮುಂಡರಗಿ 05:  ಸ್ಥಳೀಯ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರು, ಹೊರಗುತ್ತಿಗೆ ನೌಕರರು ಹಾಗೂ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಮುಂಡರಗಿ ಶಾಖೆಯ ಪೌರ ನೌಕರ/ಪೌರ ಕಾರ್ಮಿಕರಿಂದ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರಿಗೆ ಮನವಿ ನೀಡಿದರು. 

ಮುಂಡರಗಿ ಪುರಸಭೆಯಲ್ಲಿ ನಾವು ಕಳೆದ 20 ರಿಂದ 25 ವರ್ಷಗಳಿಂದ ದಿನಗೂಲಿ ನೌಕರರಾಗಿ ನಮ್ಮ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಇಲ್ಲಿಯವರೆಗೂ ನಮ್ಮ ನೌಕರಿಯನ್ನು ಖಾಯಂಗೊಳಿಸಿರುವುದಿಲ್ಲ. ನಾವು ಕಡಿಮೆ ಪಗಾರ ಪಡೆದುಕೊಂಡು ಹೆಚ್ಚಿನ ಕೆಸಲಗಳನ್ನು ಮಾಡುತ್ತಾ ಬಂದಿರುತ್ತೇವೆ. ನಮಗೆ ಇಲ್ಲಿಯವರೆಗೂ ಯಾವುದೇ ಸೇವಾ ಭದ್ರತೆಯನ್ನು ಒದಗಿಸಿರುವುದಿಲ್ಲ. ಹೀಗಾಗಿ ನಾವು ಹಲವಾರು ಭಾರಿ ನಮ್ಮ ರಾಜ್ಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಪೌರಾಡಳಿತ ಸಚಿವರುಗಳಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿರುತ್ತೇವೆ. ಇದಲ್ಲದೇ ಇತ್ತಿಚೆಗೆ ಮಾನ್ಯ ಪೌರಾಡಳಿತ ಸಚಿವರ ಮನೆಯ ಮುಂದೆ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಕೂಡಾ ಮಾಡಿದ್ದೇವೆ. ಇದಕ್ಕೆ ಪ್ರತಿಕ್ರೀಯಿಸಿದ ಪೌರಾಡಳಿತ ಸಚಿವರು ನಮಗೆ 8 ದಿನಗಳ ಕಾಲಾವಕಾಶ ನೀಡಿದ್ದಾರೆ. 

ಆದರೆ ಇಲ್ಲಿಯವರೆಗೂ ನಮ್ಮ ಬೇಡಿಕೆ ಈಡೇರದ ಕಾರಣ ಮಾನ್ಯ ರಾಜ್ಯಾಧ್ಯಕ್ಷರ ಸೂಚನೆಯಂತೆ ಪುರಸಭೆಯ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂದಿನ ತಿಂಗಳು ಡಿ.4 ರಿಂದ ಅನಿರ್ದಿಷ್ಠವಾಧಿ ರಾಜ್ಯವ್ಯಾಪ್ತಿ ಮುಷ್ಕರವನ್ನು ಕೈಗೊಳ್ಳಲಾಗುವುದು. 

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳಾದ ನೀರು ಸರಬುರಾಜು ಸಹಾಯಕ ನೌಕರರು/ವಾಹನ ಚಾಲಕರು/ಕಂಪ್ಯೂಟರ್ ಆಪರೇಟರ್‌/ಪೌರಕಾರ್ಮಿಕರ/ಲೋಡರ್ಸ/ ಕೆಎಂಆರ್‌ಪಿ ಸಿಬ್ಬಂಧಿ/ದಿನಗೂಲಿ/ಕ್ಷೇಮಾಭಿವೃದ್ಧಿ/ಕನಿಷ್ಠ ವೇತನ/ಸಮಾನ ಕೆಲಸಕ್ಕೆ ಸಮಾನ ವೇತನ/ಗುತ್ತಿಗೆ/ ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮತ್ತು ಖಾಯಂ ನೌಕರರುಗಳ ಕೆ.ಜಿ.ಐ.ಡಿ, ಜಿ.ಪಿ.ಎಫ್‌/ಗ್ರೂಫ್ ಇನ್ಸುರನ್ಸ್‌ ಮತ್ತು ಎನ್‌.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್ ಜಾರಿಗೊಳಿಸುವುದು, ಜೋತಿ ಸಂಜೀವಿನಿ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸುವ ಕುರಿತು ಮಾನ್ಯರಾದ ತಾವುಗಳು ನಮ್ಮ 25 ವರ್ಷಗಳ ಸೇವೆಯನ್ನು ಪರಿಗಣಿಸಿ ನಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಹಾಗೂ ಪೌರ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮಾನ್ಯ ಘನ ಸರ್ಕಾರಕ್ಕೆ ತಾವು ಶಿಫಾರಸ್ಸು ಮಾಡಬೇಕೆಂದು ಶಾಸಕರಲ್ಲಿ ವಿನಂತಿಸಿಕೊಂಡರು. 

ಈ ವೇಳೆ ರವಿ ಕುಂಬಾರ, ಮೈಲಪ್ಪ ದೊಡ್ಡಮನಿ, ಗಣೇಶ ಶೇಡದ, ಮೇಘರಾಜ ಲಾಲಪಡಿ, ನಿಂಗಪ್ಪ ಹಾಲಿನವರ, ಹನುಮಂತ ದೊಡ್ಡಮನಿ, ಎ.ಎಫ್‌.ನದಾಫ್, ರವಿ ಬೆನಕೊಪ್ಪ, ವಿಜಯ ಅರಿಷಿಣದ, ಎಂ.ಡಿ.ದೊಡ್ಡಮನಿ, ದೇವರಜ ಗೋಡಿ, ಶಿವಾನಂದ ಹಾತಲಗೇರಿ, ಮಹಾಂತೇಶ ಹಿರೇಮನಿ, ಕೃಷ್ಣಗೌಡ ಪಾಟೀಲ್, ಉಮೇಶ  ಬ್ಯಾಲವಾಡಗಿ, ಮಂಜುಳಾ ಹಾಲಿನವರ, ಮೌಲವ್ವ ಬೋಚನಹಳ್ಳಿ, ಲಕ್ಷ್ಮವ್ವ  ಕವಲೂರ, ಗೌರವ್ವ  ಹರಿಜನ, ರೇಣವ್ವ ಬ್ಯಾಲವಾಡಗಿ, ನೀಲವ್ವ ಹರಿಜನ, ಉಮಾ  ನಡುವಿನಮನಿ, ಗಾಯತ್ರಿ ಬಡಿಗೇರ ಇತರರು ಇದ್ದರು. 


ಸುದ್ದಿ ಓದಿ