ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಒಂದು ವಾರದಲ್ಲಿ ಕೋವಿಡ್‍-19 ಸಂಬಂಧಿತ 10,000 ಸಾವುಗಳು ವರದಿ

ಅಮೆರಿಕದಲ್ಲಿ ಒಂದು ವಾರದಲ್ಲಿ ಕೋವಿಡ್‍-19 ಸಂಬಂಧಿತ 10,000 ಸಾವುಗಳು ವರದಿ

ವಾಷಿಂಗ್ಟನ್,ಡಿಸೆಂಬರ್ 2: ಅಮೆರಿಕದಲ್ಲಿ ಕೊರೋನಾವೈರಸ್ ಸೋಂಕಿಗೆ ಸಂಬಂಧಿಸಿದ ಒಟ್ಟು ಸಾವಿನ ಸಂಖ್ಯೆ 2,70,000 ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿ ತಿಳಿಸಿದೆ.

ಒಟ್ಟು ಸಾವಿನ ಸಂಖ್ಯೆ 2,70,003 ಕ್ಕೆ ತಲುಪಿದೆ ಎಂದು ಮಂಗಳವಾರ ವಿಶ್ವವಿದ್ಯಾಲಯದ ಮಾಹಿತಿ ತಿಳಿಸಿದೆ.

ಅಂಕಿ-ಅಂಶಗಳಂತೆ, ಅಮೆರಿಕದಲ್ಲಿ ಕಳೆದ ಮೂರು ವಾರಗಳಿಂದ ವಾರಕ್ಕೆ ಸುಮಾರು 10,000 ಹೊಸ ವೈರಸ್ ಸಂಬಂಧಿತ ಸಾವುಗಳು ವರದಿಯಾಗುತ್ತಿವೆ. ಕಳೆದ ಜನವರಿಯಿಂದ ದೇಶದಲ್ಲಿ  1.36 ಕೋಟಿಗೂ ಹೆಚ್ಚು ಕೊರೊನಾವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ.

ಈ ಮೂಲಕ ಅತಿ ಹೆಚ್ಚು ಸೋಂಕು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿರುವ ದೇಶವಾಗಿ ಅಮೆರಿಕ ಮುಂದುವರೆದಿದೆ. 

ಮಾಡರ್ನಾ ಮತ್ತು ಫಿಜರ್ ಅಭಿವೃದ್ಧಿಪಡಿಸಿದ ಕನಿಷ್ಠ ಎರಡು ಕೊರೋನಾವೈರಸ್ ಲಸಿಕೆಗಳನ್ನು ವರ್ಷಾಂತ್ಯಕ್ಕೆ ಮುನ್ನ ಅಮೆರಿಕಾದ್ಯಂತ ವಿತರಿಸುವ ನಿರೀಕ್ಷೆಯಿದೆ.

ಸುದ್ದಿ ಓದಿ