ಕೋವಿಡ್ ಎಚ್ಚರಿಕೆಯ ನಡುವೆಯೂ ಶ್ರೀಲಂಕಾದಲ್ಲಿ ಶಾಲೆಗಳ ಪುನಾರಂಭ
ಕೊಲಂಬೋ ಆಗಸ್ಟ್ 10: ಕೋವಿಡ್ -19 ಸಾಂಕ್ರಾಮಿಕದ ಎಚ್ಚರಿಕೆಯ ನಡುವೆಯೂ ಕಳೆದೊಂದು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಸಕರ್ಾರಿ ಶಾಲೆಗಳನ್ನು ತೆರೆಯಲು ದ್ವೀಪರಾಜ್ಯ ಶ್ರೀಲಂಕಾ ಆದೇಶ ನೀಡಿದೆ.
ದೇಶದಲ್ಲಿ ಎಲ್ಲಾ ಶ್ರೇಣಿಯ ಶಾಲೆಗಳು ಕಠಿಣ ಆರೋಗ್ಯ ಮಾರ್ಗಸೂಚಿ ಅನುಸಾರ ಆರಂಭವಾಗಲಿವೆ. ತರಗತಿಗಳಲ್ಲಿ ಡೆಸ್ಕ್ಗಳನ್ನು ಒಂದು ಮೀಟರ್ ಅಂತರದಲ್ಲಿ ಇರಿಸಲಾಗುವುದು ಮತ್ತು ಮಕ್ಕಳಿಗೆ ಶಾಲಾ ಮೈದಾನದಲ್ಲಿ ಆಟವಾಡುವುದು ಮತ್ತು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ.
200ಕ್ಕೂ ವಿದ್ಯಾಥರ್ಿಗಳಿರುವ ಶಾಲೆಗಳಲ್ಲಿ ಪ್ರತ್ಯೇಕ ದಿನಗಳಂದು ತರಗತಿಗಳು ನಡೆಯಲಿವೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಇಲ್ಲಿಯವರೆಗೆ 2800ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಕೋವಿಡ್ ತೀವ್ರ ಹರಡುವಿಕೆ ಹಿನ್ನೆಲೆಯಲ್ಲಿ ಮಾಚರ್್ ತಿಂಗಳಿಂದ ಶ್ರೀಲಂಕಾದಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು.
ಇಲ್ಲಿಯವರೆಗೆ ದೇಶದಲ್ಲಿ 11 ಜನರು ಮೃತಪಟ್ಟಿದ್ದು, 2593 ರೋಗಿಗಳು ಚೇತರಿಸಿಕೊಂಡಿದ್ದಾರೆ.