ಅಂತರರಾಷ್ಟ್ರೀಯ

ಹೈಟಿಯಲ್ಲಿ ಅಪಹೃತ 17 ಕ್ರೈಸ್ತ ಮಿಷನರಿಗಳ ಪೈಕಿ ಇಬ್ಬರ ಬಿಡುಗಡೆ

ಹೈಟಿಯಲ್ಲಿ   ಅಪಹೃತ  17   ಕ್ರೈಸ್ತ    ಮಿಷನರಿಗಳ   ಪೈಕಿ  ಇಬ್ಬರ  ಬಿಡುಗಡೆ

ವಾಷಿಂಗ್ಟನ್,  ನ  22   ಕಳೆದ   ಅಕ್ಟೋಬರ್‌ನಲ್ಲಿ     ಹೈಟಿಯಲ್ಲಿ  ಅಪಹರಣಕ್ಕೊಳಗಾದ  17  ಅಮೆರಿಕಾ  ಹಾಗೂ  ಕೆನಡಾದ ನಾಗರಿಕರಾದ   ಧಾರ್ಮಿಕ  ಸಂಘಟನೆ  ಕ್ರಿಶ್ಚಿಯನ್ ಏಡ್ ಮಿನಿಸ್ಟ್ರೀಸ್  ಸದಸ್ಯರ   ಪೈಕಿ   ಇಬ್ಬರನ್ನು,  ಬಿಡುಗಡೆ ಮಾಡಲಾಗಿದೆ ಎಂದು ಚಾರಿಟಿ ಹೇಳಿದೆ.

"ಹೈಟಿಯಲ್ಲಿ ಇಬ್ಬರು   ಒತ್ತೆಯಾಳುಗಳನ್ನು   ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.   ಈ ಸಂಬಂಧ   ಸೀಮಿತ ಮಾಹಿತಿ  ಮಾತ್ರ ಒದಗಿಸಬಹುದು,  ಆದರೆ,  ಬಿಡುಗಡೆಯಾದ ಇಬ್ಬರು ಒತ್ತೆಯಾಳುಗಳು ಸುರಕ್ಷಿತವಾಗಿದ್ದಾರೆ   ಎಂದು    ವರದಿ ಮಾಡಲು   ನಾವು  ಸಮರ್ಥರಾಗಿದ್ದೇವೆ ಎಂದು    ಕ್ರಿಶ್ಚಿಯನ್ ಏಡ್ ಮಿನಿಸ್ಟ್ರೀಸ್   ಭಾನುವಾರ ಹೇಳಿಕೆಯಲ್ಲಿ ತಿಳಿಸಿವೆ.

ಅಕ್ಟೋಬರ್  ಅಂತ್ಯದಲ್ಲಿ,    ಅಪಹರಣಕ್ಕೊಳಗಾದ   ಮಿಷನರಿಗಳು  ಜೀವಂತವಾಗಿದ್ದು,   ಒತ್ತೆಯಾಳುಗಳು  ಮುಕ್ತಗೊಳಿಸುವ ಪ್ರಯತ್ನಗಳಲ್ಲಿ FBI ಏಜೆಂಟ್‌ಗಳು ನೆರವು  ನೀಡುತ್ತಿದ್ದಾರೆ ಎಂದು ಪೋಲೀಸ್ ಮೂಲಗಳು  ನೌವೆಲ್ಲಿಸ್ಟೆ ಪತ್ರಿಕೆಗೆ ದೃಢಪಡಿಸಿದ್ದವು.

"ಈ ಪರಿಸ್ಥಿತಿಯ  ಸಂಪೂರ್ಣ  ಪರಿಹಾರಕ್ಕಾಗಿ ಪ್ರಾರ್ಥಿಸುವುದನ್ನು  ಮುಂದುವರಿಸಲು   ಪ್ರೋತ್ಸಾಹಿಸುತ್ತೇವೆ.  ಇಬ್ಬರು ಒತ್ತೆಯಾಳುಗಳ   ಬಿಡುಗಡೆಗೆ  ಸಂತೋಷಪಡುತ್ತಿರುವಾಗ, ಇನ್ನೂ ಬಂಧನದಲ್ಲಿರುವ ಹದಿನೈದು ಜನರೊಂದಿಗೆ ನಮ್ಮ ಹೃದಯಗಳು  ಇವೆ" ಎಂದು ಸಂಸ್ಥೆ   ಹೇಳಿದೆ.


ಕಳೆದ ತಿಂಗಳು  ಹೈಟಿಯ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಿಂದ  ಸ್ವಲ್ಪ ದೂರದಲ್ಲಿ     ಮಿಷನರಿ  ತಂಡ       ಅನಾಥಾಶ್ರಮಕ್ಕೆ  ತೆರಳುತ್ತಿದ್ದಾಗ    16 ಅಮೆರಿಕಾ ನಾಗರಿಕರು    ಹಾಗೂ   ಒಬ್ಬ ಕೆನಡಾದ ಪ್ರಜೆಯನ್ನು   ಅಪಹರಿಸಲಾಗಿತ್ತು.    ಅಪಹರಣಕ್ಕೊಳಗಾದವರಲ್ಲಿ ಐವರು ಪುರುಷರು, ಏಳು ಮಹಿಳೆಯರು  ಹಾಗೂ  ಐವರು ಮಕ್ಕಳು ಸೇರಿದ್ದಾರೆ  ಎಂದು ಕ್ರಿಶ್ಚಿಯನ್ ಏಡ್ ಮಿನಿಸ್ಟ್ರೀಸ್   ಭಾನುವಾರ ಹೇಳಿಕೆಯಲ್ಲಿ ತಿಳಿಸಿವೆ.


ಮಾಧ್ಯಮ ವರದಿಗಳ ಪ್ರಕಾರ, ಅಪಹರಣಕಾರರು  ಸ್ಥಳೀಯ ಸಶಸ್ತ್ರ ಗುಂಪು   400 ಮಾವೊಜೊ   ಸದಸ್ಯರಾಗಿದ್ದು, ಅಪಹರಣಕ್ಕೊಳಗಾದವರ  ಬಿಡುಗಡೆಗೆ  ಹಣ ವಸೂಲಿ ಮಾಡುವ ದಂಧೆಯಲ್ಲಿ  ಕುಖ್ಯಾತವಾಗಿದೆ.  

 ಅಪಹರಣಕಾರರು, ಒತ್ತೆಯಾಳುಗಳ ಬಿಡುಗಡೆಗಾಗಿ  17 ಮಿಲಿಯನ್   ಡಾಲರ್‌    ಅಥವಾ ಪ್ರತಿ  ಅಪಹೃತನಿಗೆ  1 ಮಿಲಿಯನ್  ಡಾಲರ್‌ ಹಣ  ನೀಡಬೇಕೆಂದು  ನಿಗದಿಪಡಿಸಿದ್ದಾರೆ  ಅಕ್ಟೋಬರ್ 19 ರಂದು,   ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.

ಸುದ್ದಿ ಓದಿ