ಹೊಸ ಅಫ್ಗಾನ್ ಸರ್ಕಾರದೊಂದಿಗೆ ಸಂವಹನಕ್ಕೆ ಸಿದ್ಧ; ಚೀನಾ
ಬೀಜಿಂಗ್, ಸೆ 15 ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರದೊಂದಿಗೆ ಸಂವಹನ ನಡೆಸಲು ಚೀನಾ ಸಿದ್ಧವಾಗಿದೆ ಎಂದು ಅದರ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಬುಧವಾರ ತಿಳಿಸಿದ್ದಾರೆ.
ಮಂಗಳವಾರ, ಅಫ್ಗಾನಿಸ್ತಾನದ ಚೀನಾದ ರಾಯಭಾರಿ ಅಫ್ಘಾನಿಸ್ತಾನವನ್ನು ಹೊಸ ಸರ್ಕಾರ ರಚನೆಗೆ ಅಭಿನಂದಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾವೊ, ಅಫ್ಘಾನಿಸ್ತಾನದಲ್ಲಿರುವ ಚೀನೀ ರಾಯಭಾರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಮತ್ತು ಹೊಸ ಅಫ್ಗಾನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿರಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಆಗಸ್ಟ್ 15 ರಂದು ತಾಲಿಬಾನ್ ಅಫ್ಗಾನ್ ರಾಜಧಾನಿ ಕಾಬೂಲ್ ಪ್ರವೇಶಿಸಿ ಸ್ವಾಧೀನಕ್ಕೆ ಪಡೆದುಕೊಂಡಿತು. ಅಫ್ಗಾನಿಸ್ತಾನದಿಂದ ಅಮೆರಿಕ ಮಿಲಿಟರಿ ಹಿಂತೆಗೆದುಕೊಳ್ಳುವಿಕೆಯು ಆಗಸ್ಟ್ 31 ರಂದು ಪೂರ್ಣಗೊಂಡಿತು. ಇದರಿಂದ ದೇಶದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಅಮೆರಿಕದ ಮಿಲಿಟರಿ ಅಸ್ತಿತ್ವವನ್ನು ಕೊನೆಗೊಳಿಸಿತು .