ರಾಮನಾಥ ಭಟ್ ಗೆ ರೂ.16.78 ಲಕ್ಷ ಅನನ್ಯ ದಿವ್ಯ ನಾಮ !!! ಸೈಬರ್ ಜಾಲದಿಂದ ಮತ್ತೊಂದು ವಂಚನೆ ಪ್ರಕರಣ ದಾಖಲು
ಕಾರವಾರ 26: ಹಣ ಹೂಡಿಕೆ ಮಾಡಿ ಧಿಡೀರ್ ಲಾಭಗಳಿಸಲು ಹೋಗಿ 16, 78,052.00 ರೂ.ಹಣ ಕಳೆದು ಕೊಂಡ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ಇಂದು ದಾಖಲಾಗಿದೆ. ಅಂಕೋಲಾದ ಮಠದ ಕೇರಿ ವೀರವಿಠ್ಠಲ ರಸ್ತೆ ನಿವಾಸಿ ರಾಮನಾಥ ಭಟ್ ಹಣ ಕಳೆದುಕೊಂಡು ವಂಚನೆಗೆ ಒಳಗಾದ ಬಗ್ಗೆ ಕಾರವಾರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಲ್ಲಿ ಕುಳಿತೇ ಲಕ್ಷಾಂತರ ಆದಾಯದ ಆಮಿಷಕ್ಕೆ ಅಂಕೋಲಾದ ರಾಮನಾಥ ಭಟ್ ತುತ್ತಾಗಿದ್ದು, ಪೂರ್ಣ ಆನಂದವನ್ನು ಇಲ್ಲವಾಗಿಸಿಕೊಂಡಿದ್ದಾರೆ. ಬರೋಬ್ಬರಿ ರೂ.16,78,052.00 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಮೀರಾ ಮತ್ತು ದಿವ್ಯ ಹಾಗೂ ಅನನ್ಯಾ ಎಂಬ ಹೆಸರಿನ ಮಹಿಳೆಯರು ಹಣ ಹೂಡಿಕೆ ಮತ್ತು ಲಾಭ ಗಳಿಕೆ ತರಬೇತಿ ಮೂಲಕ ಇನಸ್ಟಾ ದಲ್ಲಿ ಪರಿಚಯವಾಗಿದ್ದರು.
ತರಬೇತಿ ಹೆಸರಿನಲ್ಲಿ ನಂಬಿಕೆ ಗಳಿಸಿ, ಕೊನೆಗೆ ಲಕ್ಷಾಂತರ ರೂಪಾಯಿ, ಹೂಡಿಕೆ ಮಾಡಿಸಿಕೊಂಡು, ನಂತರ ದಿವ್ಯನಾಮ ಹಾಕಿದ್ದಾರೆ. ಅಂಕೋಲಾದ ವೀರವಿಠ್ಠಲ ದೇವಸ್ಥಾನದ ಬಳಿಯ ನಿವಾಸಿ ರಾಮನಾಥ ಪೂರ್ಣಾನಂದ ಭಟ್ (44) ವಂಚನೆಗೊಳಗಾದವರು. ರಾಮನಾಥ ಭಟ್ ಇನ್ಸ್ಟಾಗ್ರಾಮ್ ಬಳಸುತ್ತಿದ್ದ ವೇಳೆ ಸ್ಮಾರ್ಟ್ ವೈಸ್ ಕ್ವಾಂಟ್ ಫಂಡ್ ಎಂಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅತೀ ಹೆಚ್ಚು ಲಾಭ ಪಡೆಯಬಹುದು ಎಂಬ ಸಂದೇಶ ಬಂದಿತ್ತು. ಕುತೂಹಲದಿಂದ ರಾಮನಾಥ ಭಟ್, ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ 0275 ಸ್ಮಾರ್ಟ್ ವೈಸ್ ಕ್ವಾಂಟ್ ಫಂಡ್ ಬೆಂಗಳೂರು ಟೀಮ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರೆ್ಡಗೊಂಡಿದ್ದಾರೆ. ಆ ಗ್ರೂಪ್‌ನ ಅಡ್ಮಿನ್‌ಗಳಾಗಿದ್ದ ಅನನ್ಯಾ ಮತ್ತು ಮೀರಾ ಎಂಬುವರು, ಸ್ಮಾರ್ಟ ಡಬ್ಲು ಕ್ಯೂ ಟ್ರೆಂಡಿಂಗ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ, ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂದು ಭರವಸೆ ಮೂಡಿಸಿದ್ದಾರೆ.
ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಿಸಿದ ಆರೋಪಿಗಳು, ಬಳಿಕ ’ಇನ್ನಷ್ಟು ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ’ ಎಂದು ಹಂತ ಹಂತವಾಗಿ ರಾಮನಾಥ ಭಟ್ ನನ್ನು , ತಮ್ಮ ಜಾಲಕ್ಕೆ ಸೆಳೆದಿದ್ದಾರೆ. ಲಾಭದ ಆಸೆಗೆ ಬಿದ್ದ ಭಟ್ಟರು ಇದೇ ವರ್ಷದ ಮಾರ್ಚ 28 ರಿಂದ ಮೇ 14ರ ವರೆಗೆ ವಿವಿಧ ಹಂತಗಳಲ್ಲಿ ರಾಮನಾಥ ಭಟ್ ರೂ. 16,78,052.00 ಹಣವನ್ನು ಹೂಡಿಕೆ ಮಾಡಿದ್ದಾರೆ. ಆ್ಯಪ್‌ನಲ್ಲಿ ಲಾಭದ ಅಂಕಿ-ಅಂಶಗಳು ಕಾಣಿಸುತ್ತಿದ್ದರೂ, ಹಣ ವಾಪಸ್ ಪಡೆಯಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮೂರು ತಿಂಗಳಾದರೂ ಒಂದು ರೂಪಾಯಿಯೂ ಕೈಗೆ ಸಿಗದೇ ಹೋದಾಗ, ಸೈಬರ್ ವಂಚಕರ ಜಾಲಕ್ಕೆ ಬಿದ್ದಿದ್ದೇನೆ ಎಂಬುದು ರಾಮನಾಥಗೆ ಗೊತ್ತಾಗಿದೆ. ಸೈಬರ್ ಠಾಣೆಗೆ ದೂರು: ವಂಚನೆಗೊಳಗಾದ ರಾಮನಾಥ ಭಟ್ ಕಾರವಾರ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಆರಂಭಿಸಿದ್ದಾರೆ.