ಬೆಂಗಳೂರಿನಲ್ಲಿ ಏ.4 ರಂದು ರಾಜಗುರು ಸ್ಮೃತಿ ಸಂಗೀತೋತ್ಸವ ಕಾರ್ಯಕ್ರಮ
Rajguru Smriti Music Festival to be held in Bengaluru on April 4
ಧಾರವಾಡ ಏ.1: ಹಿಂದೂಸ್ತಾನಿ ಸಂಗೀತ ದಿಗ್ಗಜ ಪದ್ಮಭೂಷಣ ಪಂ. ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ ರಾಜಗುರು ಸ್ಮೃತಿ ಸಂಸ್ಥೆಯು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಎಪ್ರಿಲ್ 4 ರಂದು ಸಂಜೆ 6 ಗಂಟೆಗೆ ಸ್ಮೃತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾರತಿದೇವಿ ರಾಜಗುರು ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಖ್ಯಾತ ಸಾಂಸ್ಕೃತಿಕ ಸಂಘಟಕ ನಿಜಗುಣ ರಾಜಗುರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಹಿರಿಯ ಗಾಯಕ ಪಂ. ಪರಮೇಶ್ವರ ಹೆಗಡೆ ಅವರು ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಅನುರಾಧಾ ಕುಬೇರ ಅವರ ಗಾಯನ ಹಾಗೂ ಮೊಹಸಿನ್ ಖಾನರ ಸಿತಾರ ವಾದನ ನಡೆಯಲಿದೆ. ಸಹ ಕಲಾವಿದರರಾಗಿ ತಬಲಾದಲ್ಲಿ ಸುಮಿತ್ ನಾಯಕ ಹಾಗೂ ರೂಪಕ ಕಲ್ಲೂರಕರ, ಹಾರ್ಮೋನಿಯಂನಲ್ಲಿ ಸೌಮಿತ್ರಾ ಕ್ಷೀರಸಾಗರ ಸಹಕಾರ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಪಂ. ರಾಜಗುರು ಅವರ ಶಿಷ್ಯರು ಪ್ರಸಿದ್ಧ ಗಾಯಕರು ಆಗಿರುವ ಪಂ. ಪರಮೇಶ್ವರ ಹೆಗಡೆಯವರು ಕಳೆದ 32 ವರ್ಷಗಳಿಂದ ರಾಜಗುರು ಸ್ಮೃತಿ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡುತ್ತಾ ಇದ್ದು. ತಮ್ಮ ಗುರುಗಳ ಸ್ಮರಣೆಯಲ್ಲಿ ಸಂಗೀತ ಸಮಾರೋಹವನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 