ಹಟಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ರಾಜಶೇಕರ ಸೋರಗಾಂವಿ
ರಬಕವಿ-ಬನಹಟ್ಟಿ : ಹಟಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಜನತಾ ಶಿಕ್ಷಣ ಸಂಘದ ನಿರ್ದೇಶಕ ಬನಹಟ್ಟಿಯ ರಾಜಶೇಖರ (ಶಂಕರ) ಸೋರಗಾಂವಿ ಅಧಿಕಾರ ಸ್ವೀಕರಿಸಿದರು.
ಶ್ರೀ ಚಿಕ್ಕರೇವಣಸಿದ್ಧ ಶಿವಶರಣರ ಸಾನಿಧ್ಯದಲ್ಲಿ ಅಕ್ಕಲಕೋಟೆಯ ಸಂಸ್ಥಾನ ಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ, ಅವರು ಸಮಾಜದ ಬಾಂಧವರ ಸಹಕಾರ ಬಹಳ ಮುಖ್ಯವಾಗಿದ್ದು, ಹಟಗಾರ ಸಮಾಜ ಇನ್ನಷ್ಟು ಬಲಪಡಿಸಲು ಪ್ರಯತ್ನ ಮಾಡುತ್ತೇನೆ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಏಳ್ಗಿಗೆ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ರಾಜಶೇಖರ ಮಾಲಾಪೂರ, ರವೀಂದ ಬಾಡಗಿ, ರಾಜು ಬೀಳಗಿ, ಸೋಮನಾಥ ಗೊಂಬಿ, ಓಂಪ್ರಕಾಶ ಮನಗೂಳಿ, ದೇವೇಂದ್ರ ಶೀಲವಂತ, ಈರಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಸೋರಗಾಂವಿ, ಸದಾಶಿವ ತಟಕೋಟಿ, ಸುರೇಶ ಬೀಳಗಿ, ಅಶೋಕ ಮಹಾಜನ, ಪರಮೇಶ್ವರಿ ಸಹಕಾರಿ ಸಂಘದ ಅಧ್ಯಕ್ಷೆ ಮಾಲಾ ಬಾವಲತ್ತಿ, ಶಾಂತಾ ಮಂಡಿ, ದಾನೇಶ್ವರಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಸೋರಗಾಂವಿ, ಗಂಗಪ್ಪಾ ಮಂಟೂರ ಸೇರಿದಂತೆ ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಹಟಗಾರ ಸಮಾಜ ಬಾಂಧವರು ಉಪಸ್ಥಿತರಿದ್ದರು.
ರಾಜಶೇಖರ ಸೋರಗಾಂವಿಯವರು ಹಟಗಾರ ಸಮಾಜದ ರಾಷ್ಟೀçಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವದನ್ನು ತೇರದಾಳ ಮತಕ್ಷೇತ್ರದ ಡಾ|| ಎ.ಆರ್.ಬೆಳಗಲಿ, ಬ್ರೀಜಮೋಹನ ಡಾಗಾ, ಡಾ|| ಎಂ.ಎಸ್.ದಡ್ಡೇನ್ನವರ, ಡಾ|| ಪದ್ಮಜೀತ ನಾಡಗೌಡ ಪಾಟೀಲ, ಮೂಡಲಗಿ ಕುರುಹಿಶೆಟ್ಟಿ ಬ್ಯಾಂಕಿನ ಬನಹಟ್ಟಿ ಅಧ್ಯಕ್ಷ ಗಂಗಪ್ಪ ಮಂಟೂರ, ಚಿದಾನಂದ ಮಟ್ಟಿಕಲ್ಲಿ, ವೀರುಪಾಕ್ಷಪ್ಪ ಕೊಕಟನೂರ, ಶ್ರೀಶೈಲ ಗೊಂಬಿ, ರವೀಂದ್ರ ಚನ್ನಪ್ಪನವರ, ಕುಮಾರ ಬಿಳ್ಳೂರ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.