ಕ್ರೀಡೆ

ರಾಹುಲ್, ಪಂತ್ ವೈಫಲ್ಯ ಮುಚ್ಚಿ ಹಾಕಲು ಕೃನಾಲ್​ಗೆ ಚಾನ್ಸ್​

ರಾಹುಲ್, ಪಂತ್ ವೈಫಲ್ಯ ಮುಚ್ಚಿ ಹಾಕಲು ಕೃನಾಲ್​ಗೆ ಚಾನ್ಸ್​

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನ 1-1 ರಿಂದ ಸಮಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದ್ರೆ ಇದರ ನಡುವೆಯೂ ವಿರಾಟ್ ಪಡೆಯ ಈ ಇಬ್ಬರು ಆಟಗಾರರ ಮೇಲೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಬ್​ ಪಂತ್​ ವಿರುದ್ಧ ಹರಿಹಾಯುತ್ತಿದ್ದಾರೆ. ಸತತ ವೈಫಲ್ಯ ಅನುಭವಿಸಿದ್ರು, ಇವರಿಬ್ಬರಿಗೆ ತಂಡದಲ್ಲಿ ಸ್ಥಾನ ನೀಡುತ್ತಿರೋದಕ್ಕೆ ನಾಯಕ ಕೊಹ್ಲಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಅಲ್ಲದೇ ಟೀಮ ಇಂಡಿಯಾ ಮಾಜಿ ಆಟಗಾರ ಸಂಜಯ್​​​​ ಮಂಜ್ರೇಕರ್ ಕೂಡ ಈ ಬ್ಯಾಟಿಂಗ್ ಸ್ಟಾರ್ಸ್​ ಆಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಹುಲ್, ಪಂತ್​ ವೈಫಲ್ಯ ಮುಚ್ಚಿಹಾಕಲು ಆಲ್​ರೌಂಡರ್​ ಕೃನಾಲ್ ಪಾಂಡ್ಯಾಗೆ ಪ್ಲೇಯಿಂಗ್ ಇಲೆವನ್​ನಲ್ಲಿ ಆಡಿಸುತ್ತಿದ್ದಾರೆ. ಕೃನಾಲ್ ಬೌಲಿಂಗ್​ ಜೊತೆ ಬ್ಯಾಟಿಂಗ್​ ಕೂಡ ಮಾಡಬಲ್ಲರು. ತಂಡದಲ್ಲಿ ಯುಜುವೇಂದ್ರ ಚಹಲ್​ಗೆ ಅವಕಾಶ ನೀಡಿ ಕೃನಾಲ್​ರನ್ನ ಬ್ಯಾಟ್ಸ್​​ಮನ್​ ಜಾಗದಲ್ಲಿ ಆಡಿಸಿದ್ರೆ ತಂಡ ಮತ್ತಷ್ಟು ಬಲಿಷ್ಠವಾಗಿರುತ್ತಿತ್ತು ಎಂದು ಟ್ವೀಟ್​ ಮಾಡಿದ್ದಾರೆ.  ರಾಹುಲ್ ಹಾಗೂ ರಿಷಬ್​ ಪಂತ್​ ವೆಸ್ಟ್ ಇಂಡೀಸ್​​​ ವಿರುದ್ಧದ ಟಿ20 ಸರಣಿಯಲ್ಲೂ ಫೇಲ್ಯೂರ್ ಆಗಿದ್ರು. ಈಗ  ಸಿಕ್ಕ ಅಕವಾಶಗಳನ್ನೆಲ್ಲಾ ರಾಹುಲ್  ಕೈ ಚೆಲ್ಲುತ್ತಿದ್ದು, ಅಭಿಮಾನಿಗಳ ಟೀಕೆಗೊಳಗಾಗಿದ್ದಾರೆ. ಧೋನಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಪಂತ್​, ಕಾಂಗರೂ ನಾಡಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಎಡವಿದ್ದಾರೆ.

ಸುದ್ದಿ ಓದಿ