ಬೆಳಗಾವಿಯ ಆರ್ ಟಿಓ ಕಚೇರಿಯಲ್ಲಿ ರೇಡಿಯಂ ಮಾಫೀಯಾ ವಾಸನೆ : ವಾಹನ ನೋಂದಣಿಗೆ ಅಧಿಕಾರಿಗಳು ಸೂಚಿಸಿದ ದುಬಾರಿ ಅಂಗಡಿಯಲ್ಲಿ ರೇಡಿಯಂ ಹಾಕಿಸಬೇಂಕತೆ

ಬೆಳಗಾವಿಯ ಆರ್ ಟಿಓ ಕಚೇರಿಯಲ್ಲಿ ರೇಡಿಯಂ ಮಾಫೀಯಾ ವಾಸನೆ : ವಾಹನ ನೋಂದಣಿಗೆ ಅಧಿಕಾರಿಗಳು ಸೂಚಿಸಿದ ದುಬಾರಿ ಅಂಗಡಿಯಲ್ಲಿ ರೇಡಿಯಂ ಹಾಕಿಸಬೇಂಕತೆ

ಬೆಳಗಾವಿ : ಬೆಳಗಾವಿಯ ಸಾರಿಗೆ (ಆರ್‍ಟಿಓ) ಇಲಾಖೆಯ ಕಚೇರಿಯಲ್ಲಿ ರೇಡಿಯಂ ರಿಪ್ಲೇಕ್ಟರ್ ಮಾಫೀಯಾ ಕಾರ್ಯ ಮಾಡುತ್ತಿರುವ ಬಗ್ಗೆ ವಾಸನೆ ಬರತಾ ಇದ್ದು, ಕಚೇರಿ ಅಧಿಕಾರಿಗಳು ತಾವು ಸೂಚಿಸಿದ ದುಬಾರಿ ಅಂಗಡಿಯಲ್ಲಿ ವಾಹನಗಳಿಗೆ ರೇಡಿಯಂ ಅಂಟಿಸಿದರೆ ಮಾತ್ರ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಹೊರಗಿನ ಅಂಗಡಿಕಾರರ ಬಳಿ ಅಂಟಿಸಿದರೆ ಆ ವಾಹನಕ್ಕೆ ನೋಂದಣಿ ಮಾಡುವದಿಲ್ಲ ಎನ್ನುವ ಸಾರಿಗೆ ಇಲಾಖೆಯ ವಿರುದ್ದ ಕನ್ನಡಪರ ಹೋರಾಟಗಾರರು ಮತ್ತು ವಾಹನ ಮಾಲಿಕರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.


    ಹೌದು ಓದುಗರೇ ಇಂತಹ ಒಂದು ಪ್ರತಿಭಟನೆ ಬೆಳಗಾವಿಯ ಸಾರಿಗೆ (ಆರ್‍ಟಿಓ) ಅಧಿಕಾರಿಗಳ ವಿರುದ್ದ ನಡೆದಿದ್ದು, ಬೆಳಗಾವಿಯ ಸಾರಿಗೆ (ಆರ್‍ಟಿಓ) ಇಲಾಖೆಯಲ್ಲಿ ಅಂದಾದುಂದಿ ಕಾರುಬಾರ ನಡೆದಿದ್ದು, ವಾಹನ ನೋಂದಣಿ ಮಾಡಿಸಲು ಕಚೇರಿಗೆ ಆಗಮಿಸುವ ಮಾಲಿಕರು ಸಾರಿಗೆ ಇಲಾಖೆಯ ಅಧಿಕಾರಿಗಳು ತಾವು ಸೂಚಿಸಿದ ದುಬಾರಿ ಬೆಲೆಯಲ್ಲಿ ಮಾರಾಟವಾಗುವ ಅಂಗಡಿಯಲ್ಲಿ ವಾಹನಗಳಿಗೆ ರೆಡಿಯಂ ಹಾಕಿಸಿದರೆ ಮಾತ್ರ ವಾಹನಗಳ ನೋಂದಣಿ ಮಾಡುತ್ತಿದ್ದು, ಕಡಿಮೆ ಬೆಲೆ ಇರುವ ರೆಡಿಯಂ ಅಂಗಡಿಗಳಲ್ಲಿ ವಾಹನಗಳಿಗೆ ರೆಡಿಯಂ ಹಾಕಿಸಿದರೆ ನೋಂದಣಿ ಮಾಡಲಾಗುತ್ತಿಲ್ಲ ಎನ್ನುವ ಕೂಗು ಕೇಳಿ ಬಂದಿದ್ದು, ಈ ನಿಯಮ ಸರಕಾರ ಮಾಡಿದೇಯಾ ಅಥವಾ ಅಂಗಡಿಕಾರನ ಆಮಿಷಕ್ಕೆ ಒಳಗಾಗಿ ಸಾರಿಗೆ ಅಧಿಕಾರಿಗಳು ಈ ನಿಯಮ ಮಾಡಿದ್ದಾರೆ ಎನ್ನುವದು ತೋಚದಂತಾಗಿದ್ದು, ಇದರ ವಿರುದ್ದ ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ನೇತೃತ್ವದಲ್ಲಿ ಕೆಲ ಕನ್ನಡಪರ ಹೋರಾಟಗಾರರು ಮತ್ತು ಅಂಗಡಿಗಳ ಮಾಲಿಕರು ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದಾರೆ.  

   ವಾಹನಗಳ ನೋಂದಣಿ ಮಾಡಿಸಲು ಮಾಲಿಕರು ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಹೋದರೆ ಅಧಿಕಾರಿಗಳು ಸೂಚಿಸಿದ ದುಬಾರಿ ಬೆಲೆಯ ಅಂಗಡಿಕಾರರ ಬಳಿಯೇ ರೇಡಿಯಂ ರಿಪ್ಲೇಕ್ಷಟರ್ ಹಾಕಿಸಿದರೆ ಮಾತ್ರ ನೋಂದಣಿ ಮಾಡಿಸಿಕೊಡಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಇರುವ ರೇಡಿಯಂ ಹಾಕಿಸುವ ಅಂಗಡಿಗಳಲ್ಲಿ ರೇಡಿಯಂ ಹಾಕಿಸಿದರೆ ಇಲ್ಲಿ ನೋಂದಣಿ ಇಲ್ಲ ಎಂದು ಬೆಳಗಾವಿಯ ಸಾರಿಗೆ ಇಲಾಖೆಯ ಅಧಿಕಾರಿಗಳ ಅಂದಾದುಂದಿ ಕಾರಬಾರದ ವಿರುದ್ದ ರೊಚ್ಚಿಗೇದ್ದಿರುವ ಕೆಲ ಕನ್ನಡಪರ ಹೋರಾಟಗಾರರು ಮತ್ತು ವಾಹನಗಳ ಮಾಲಿಕರು ಸಾರಿಗೆ ಅಧಿಕಾರಿಗಳ ಈ ಕಾರುಬಾರಿನ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

     ಸಾರಿಗೆ ಅಧಿಕಾರಿಗಳು ಸೂಚಿಸಿದ ಅಂಗಡಿಯಲ್ಲಿ ರೇಡಿಯಂ ರಿಪ್ಲೇಕ್ಟರ್ ಹಾಕಲು ವಾಹನ ಮಾಲಿಕರು ತೆರಳಿದರೆ ಒಂದು ವಾಹನಕ್ಕೆ ಸುಮಾರು 3 ಸಾವಿರದ ವರೆಗೆ ಹಣ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದರಂತೆ ಕಚೇರಿ ಹೊರಗೆ ಇರುವ ಅಂಗಡಿಗಳಲ್ಲಿ ರೇಡಿಯಂ ರಿಪ್ಲೇಕ್ಟರ್ ಹಾಕಿಸಿದರೆ ಒಂದು ವಾಹನಕ್ಕೆ 100ರಿಂದ 150 ರೂ ಖರ್ಚಾಗುತ್ತಿದೆ. ಆದರೆ 100 ಅಥವಾ 150 ರೂ ನೀಡಿ ರೇಡಿಯಂ ಹಾಕಿಸಿದರೆ ಆ ವಾಹನಗಳನ್ನು ನೋಂದಣಿ ಮಾಡಿಸಿಕೊಡುತ್ತಿಲ್ಲ ಎನ್ನು ಕೂಗು ಕೇಳಿ ಬರುತ್ತಿದೆ. ಸಾರಿಗೆ ಅಧಿಕಾರಿಗಳು ಸೂಚಿಸುತ್ತಿರುವ ರೇಡಿಯಂ ಅಂಗಡಿಯಲ್ಲಿಯೇ ರೇಡಿಯಂ ಖರೀದಿಸಬೇಕಾ ಎನ್ನುವ ಹಾಗೇ ಸರಕಾರ ಏನಾದರೂ ನಿಯಂ ಹೊರಡಿಸಿದೆಯಾ ಅಥವಾ ಬೆಳಗಾವಿ ಸಾರಿಗೆ ಇಲಾಖೆ ಕಚೇರಿಯಲ್ಲಿ ಈ ನಿಯಮ ಕಾರ್ಯ ಮಾಡುತ್ತಿದೆಯಾ ಎನ್ನುವದು ಮಾತ್ರ ನಿಗೂಢವಾಗಿದೆ.


ಸುದ್ದಿ ಓದಿ