ನಾಳೆ ಆರ್.ಎಸ್.ಎಸ್ ಪಥಸಂಚಲನ
RSS procession tomorrow
ಲೋಕದರ್ಶನ ವರದಿ
ನಾಳೆ ಆರ್.ಎಸ್.ಎಸ್ ಪಥಸಂಚಲನ
ಬೀಳಗಿ 10: ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಾಬ್ದಿ ಸಮಾರಂಭ ಅದ್ಧೂರಿಯಾಗಿ ಆಚರಿಸಲು ಸಂಪೂರ್ಣ ತಯಾರಿಗೊಂಡಿದೆ. ಬೀಳಗಿ ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಪರಪರಿ ಹಾಗೂ ಬ್ಯಾನರ್, ಕಟೌಟ್‌ಗಳಿಂದ ಶೃಂಗಾರಗೊಂಡಿದೆ.
ತಾಲೂಕು ಪಥಸಂಚಲನವು ಅ.12. ಭಾನುವಾರ ರಂದು ಸಾಯಂಕಾಲ 5-30 ಗಂಟೆಗೆ ಇಲ್ಲಿಯ ಸಿದ್ಧೇಶ್ವರ ಪ. ಪೂ. ಕಾಲೇಜು ಆವರಣದಲ್ಲಿ ಸಮಾರಂಭ ಜರಗುವುದು.
ಮುಖ್ಯ ಅತಿಥಿಯಾಗಿ, ಕೃಷ್ಣದೇವರಾಯ ಪತ್ತಿನ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಎಸ್. ಪಾಟೀಲ ವಹಿಸುವರು. ಬೌದ್ಧಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣಕುಮಾರ ಮಾತನಾಡುವರು.
ಪಥಸಂಚಲನ ಮಾರ್ಗಸೂಚಿ: ಮಾರ್ಗ 01: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಂದಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಿಲ್ಲಾ ಓಣಿ (ಯು ಟರ್ನ್), ಗ್ರಾಮ ಚಾವಡಿ, ನೇಕಾರ ಓಣಿ, ಹುಚ್ಚೇಶ್ವರ ನಗರ, ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು.
ಮಾರ್ಗ 02: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗಾಂಧಿ ನಗರ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಕಂಬಾರ ಓಣಿ, ಸುರಳಿಬಾವಿ ಓಣಿ, ಹೋಳಿ ಕಟ್ಟಿ, ಮುದ್ದೇಶ್ವರ ದೇವಸ್ಥಾನ (ಯು ಟರ್ನ್) ಬಸವ ವೃತ್ತ, ಶಿವಾಜಿ ವೃತ್ತ, ಸಿದ್ಧೇಶ್ವರ ಕಾಲೇಜು ಮೈದಾನ ಸೇರುವುದು ಎಂದು ತಾಲೂಕು ಕಾರ್ಯವಾಹ ಪ್ರೇಮ್ ಕಣವಿ ಪತ್ರಿಕೆಗೆ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 