ಹೆಚ್ಚುತ್ತಿರುವ ಹಾರ್ಟ್‌ ಅಟ್ಯಾಕ್ ಮತ್ತು ಕ್ಯಾನ್ಸರ್ ಕಾಯಿಲೆಗಳ ನಿಯಂತ್ರಣಕ್ಕೆ ಬೇಕರಿ ಮತ್ತು ಹೊಟೇಲ್, ಪುಟ್‌ಪಾತ್ ಅಂಗಡಿ ಮೇಲೆ ದಾಳಿ ನಡೆಸಿ ತಜ್ಞರಿಂದ ಪರೀಕ್ಷಿಸಿ, ಜನಸಾಮಾನ್ಯರ ಆರೋಗ್ಯದ ಕಡೆ ಗಮಹಹರಿಸಲು ಒತ್ತಾಯ

ಹೆಚ್ಚುತ್ತಿರುವ ಹಾರ್ಟ್‌ ಅಟ್ಯಾಕ್ ಮತ್ತು ಕ್ಯಾನ್ಸರ್ ಕಾಯಿಲೆಗಳ ನಿಯಂತ್ರಣಕ್ಕೆ ಬೇಕರಿ ಮತ್ತು ಹೊಟೇಲ್, ಪುಟ್‌ಪಾತ್ ಅಂಗಡಿ ಮೇಲೆ ದಾಳಿ ನಡೆಸಿ ತಜ್ಞರಿಂದ ಪರೀಕ್ಷಿಸಿ, ಜನಸಾಮಾನ್ಯರ ಆರೋಗ್ಯದ ಕಡೆ ಗಮಹಹರಿಸಲು ಒತ್ತಾಯ To control the increasing number of heart attacks and cancer diseases, raid bakeries, hotels, and fo

ಲೋಕದರ್ಶನ ವರದಿ 

 ರಾಣೇಬೆನ್ನೂರು 31: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾರ್ಟ್‌ ಅಟ್ಯಾಕ್‌ನಿಂದಾಗುವ ಸಾವಿನ ಪ್ರಕರಣಗಳು ಮತ್ತು ಉಲ್ಪಣಗೊಳ್ಳುತ್ತಿರುವ ಕ್ಯಾನ್ಸ್‌ರ್ ಕಾಯಿಲೆಗಳ ಮತ್ತು ಹೃದಯಕ್ಕೆ ಸಂಬಂಧಿಸಿದ ನಾನಾ ಕಾಯಿಲೆಗಳ ನಿಯಂತ್ರಣಕ್ಕೆ ಕೂಡಲೇ ನಗರಸಭೆಯ ಪೌರಾಯುಕ್ತರು, ಆರೋಗ್ಯ ಅಧಿಕಾರಿಗಳಿಂದ ರಾಣೇಬೆನ್ನೂರು ನಗರದ ಎಲ್ಲಾ ಬೇಕರಿ, ಪುಟ್‌ಪಾತ್ ಅಂಗಡಿ, ಹೊಟೇಲ್‌ಗಳ ಮೇಲೆ ದೀಡೀರ್ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಪರೀಕ್ಷಸಬೇಕಲ್ಲದೆ ಅಡುಗೆ ಮಾಡುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿ ಜನ ಸಾಮಾನ್ಯರ ಆರೋಗ್ಯದ ಕಡೆ ಗಮನಹರಿಸಬೇಕೆಂದು ರೈತ ಮುಖಂಡ ಹಾಗೂ ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಪೌರಾಯುಕ್ತರನ್ನು ಒತ್ತಾಯಸಿದರು.  

       ನಿನ್ನೆ ಮಧ್ಯಾನ್ಹ 12 ಘಂಟೆಯ ಸುಮಾರಿಗೆ ಪ್ರಗತಿಪರ, ರೈತಪರ, ಕರ್ನಾಟಕ ಅಟೋ ಚಾಲಕರ ಒಕ್ಕೂಟ ಮತ್ತು ಪ್ರಜ್ಞಾವಂತ ನಾಗರಿಕರ ಪರವಾಗಿ ರಾಣೇಬೆನ್ನೂರು ನಗರದ ನಗರಸಭೆಯ ಪೌರಾಯುಕ್ತರಾದ ಫಕ್ಕೀರ​‍್ಪ  ಇಂಗಳಗಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಹೆಚ್ಚುತ್ತಿರುವ ಹಾರ್ಟ್‌ ಅಟ್ಯಾಕ್ ಮತ್ತು ಕ್ಯಾನ್ಸರ್ ಕಾಯಿಲೆಗಳು ಹಾಗೂ ಹೃದಯ ರೋಗಕ್ಕೆ ಸಂಬಂಧಿಸಿದ ಭೀಕರ ಕಾಯಿಲೆಗಳಿಂದ ಜನಸಾಮಾನ್ಯರು ಇದ್ದಕ್ಕಿಂದ್ದಂತೆ ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಮೂಡಿಸಿದೆ.

        ಈ ದಿಢೀರ ಸಾವಿಗೆ ಬೇಕರಿ ಮತ್ತು ಪುಟ್‌ಪಾತ್ ಎಗ್‌ರೃಸ್ ನಲ್ಲಿ ತಯಾರಿಸಿದ ಆಹಾರ ಪದಾರ್ಥಗಳು ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳದ ಪುಟ್‌ಪಾತ್ ಅಂಗಡಿ ಮತ್ತು ಹೊಟೇಲ್‌ಗಳಲ್ಲಿನ ಕಳಪೆ ಆಹಾರ ಸಾಮಾಗ್ರಿಗಳು ಮತ್ತು ಅಶುಭತ್ವವೆ ಮುಖ್ಯ ಕಾರಣವಾದರೆ ಅನಾರೋಗ್ಯ ಪೀಡಿತ ಅಡುಗೆ ಸಿಬ್ಬಂದಿಯವರದ್ದು ಇನ್ನೊಂದು ಕಡೆಯಾಗದೆ ಎಂದ ಪಾಟೀಲರು ಅತ್ಯಂತ ಲಾಭಕ್ಕಾಗಿ ಕಳೆಪೆ, ಹೆಚ್ಚಿನ ಲಾಭಕ್ಕಾಗಿ ಕಳೆಪೆ ಗುಣಮಟ್ಟದ ಆಹಾರ ಸಮಾಗ್ರಿಗಳನ್ನು ಇವರು ಬಳಕೆ ಮಾಡಿ ಜನರ ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.

        ಕಳೆದವಾರ ಮೇಡ್ಲೇರಿ ರಸ್ತೆ ಚೌಡೇಶ್ವರಿ ದೇವಸ್ಥಾನದ  ಹತ್ತಿರವಿರುವ ಬೇಕರಿಯೊಂದರಲ್ಲಿ ಬೂಸ್ಟ್‌ ಬಂದ ಕೇಕನ್ನು ಮಾರಾಟ ಮಾಡಿದ ಪ್ರಕರಣ ಕೇವಲ ಅದೊಂದೆ ಬೇಕರಿದಲ್ಲ  ಪ್ರತಿಯೊಂದು ಬೇಕರಿಗಳು ಇದಕ್ಕೆ ಹೊರತಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ತಾವುಗಳು ಎಲ್ಲಾ ಬೇಕರಿ ಮಾಲಿಕರ, ಹೊಟೇಲ್ ಮಾಲೀಕರ, ಪುಟ್‌ಪಾತ್ ವ್ಯಾಪರಸ್ಥರ ಮತ್ತು ನಮ್ಮೆಲ್ಲಾ ಹೋರಾಟಗಾರರ ಸಭೆ ಕರೆಯಬೇಕೆಂದು ಒತ್ತಾಯಿಸಿದರು. ಅವರು ನಿನ್ನೆ ಮೊನ್ನೆ ಬೇಟಿಯಾಗಿದ್ದ ಗೆಳೆಯರು, ಆತ್ಮೀಯರು ಇದ್ದಕ್ಕಿಂದಂತೆ ಮತ್ತ್ತೆ ಹುಟ್ಟಿ ಬಾ ಎನ್ನುವ ಬ್ಯಾನರ್‌ಗಳನ್ನು ಕಾಣಿಸುತ್ತಿರುವುದು ತುಂಬಾ ನೋವಾಗುತ್ತದೆ. ಜನರೂ ಕೂಡ ಈ ಜಂಕ್ ಪುಡ್ ನಾನ್ ವೆಜ್, ಎಗ್‌ರೈಸನಂಥ ಪುಟ್‌ಪಾತ್ ಆಹಾರದಿಂದ ದೂರವಿರಬೇಕೆಂದರು.  

        ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿಯವರು ಸದ್ಯದಲ್ಲೆ ನಿಮ್ಮ ಮನವಿಯಂತೆ ಈ ಹೊಟೇಲ್‌ಗಳ, ಬೇಕರಿ ಮಾಲೀಕರ, ಪುಟ್‌ಪಾತ್ ಅಂಗಡಿ ಮಾಲೀಕರ ಸಭೆ ಕರೆಯುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಈರಣ್ಣ ಹಲಗೇರಿ, ಅಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಜಗದೀಶ ಕೆರೂಡಿ, ವೀರೇಶ ಬಳ್ಳಾರಿ, ಎಲ್ಲಪ್ಪ ಚಿಕ್ಕಣವಣವರ, ಶಂಕರ ಪೂಜಾರ್ ಕುಬೇರ​‍್ಪ ಪೂಜಾರ, ವೆಂಕಟೇಶ ಲಮಾಣಿ, ಶಂಕರ್ ದಮ್ರಳ್ಳಿ, ಜಯ್ಯಪ್ಪ ಚೌಹಾಣ್, ಪ್ರವೀಣ ಪೂಜಾರ ಮುಂತಾದವರು ಭಾಗವಹಿಸಿದ್ದರು.