ಅಂತರರಾಷ್ಟ್ರೀಯ

ಅಂತರರಾಷ್ಟ್ರೀಯ ಜೂಡೋ ಫೆಡರೇಶನ್‌ನಿಂದ ಪುಟಿನ್ ಔಟ್

ಅಂತರರಾಷ್ಟ್ರೀಯ ಜೂಡೋ ಫೆಡರೇಶನ್‌ನಿಂದ ಪುಟಿನ್ ಔಟ್

ಹಂಗೇರಿ : ಮಾರ್ಚ್ 08: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಕ್ರಮಣದ ಬಗ್ಗೆ ಇಡೀ ಪ್ರಪಂಚವೇ ಅವರ ವಿರುದ್ದ ದಿಗ್ಭಂಧನವನ್ನ ಹೇರುತ್ತಿದೆ. ಇದರಿಂದ ಕ್ರೀಡಾಲೋಕವೇನೂ ಹೊರತಲ್ಲ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜೂಡೋ (IJF) ಇತ್ತೀಚೆಗೆ ಪುಟಿನ್ ಅವರನ್ನು ಪದಚ್ಯುತಗೊಳಿಸಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದೆ.

(IJF)ನ ಗೌರವಾಧ್ಯಕ್ಷರಾಗಿದ್ದ ರಷ್ಯಾದ ಅಧ್ಯಕ್ಷ ಪುಟಿನ್ ರನ್ನ ಮೊನ್ನೆಯಷ್ಟೆ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿತ್ತು. ಈಗ ಐಜೆಎಫ್ ನಿಂದ ಅವರನ್ನು ಶಾಶ್ವತವಾಗಿ ತೆಗೆದುಹಾಕಿದೆ. ಪುಟಿನ್ ಅವರ ಆಪ್ತ ಸಹಾಯಕ ಅರ್ಕಾಡಿ ರಾಟೆನ್‌ಬರ್ಗ್ ಅವರನ್ನು IJF ಬಿಟ್ಟಿಲ್ಲ. ಐಜೆಎಫ್ ಇಬ್ಬರನ್ನು ಎಲ್ಲಾ ಸ್ಥಾನಗಳಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ಸುದ್ದಿ ಓದಿ