ಅಂತರರಾಷ್ಟ್ರೀಯ

ಉಕ್ರೇನ್‌ಗೆ ರಷ್ಯಾದ ಸೈನ್ಯವನ್ನು ನುಗ್ಗಿಸಲು ಪುಟಿನ್ ಆದೇಶ!

ಉಕ್ರೇನ್‌ಗೆ ರಷ್ಯಾದ ಸೈನ್ಯವನ್ನು ನುಗ್ಗಿಸಲು ಪುಟಿನ್ ಆದೇಶ!

ಹೊಸದಿಲ್ಲಿ: 22ಲುಹಾನ್ಸ್ಕ್-ಡೊನೆಟ್ಸ್ಕ್ ಎರಡು ಉಕ್ರೇನಿಯನ್ ಪ್ರಾಂತ್ಯಗಳನ್ನು ಸ್ವತಂತ್ರ ದೇಶಗಳೆಂದು ರಷ್ಯಾ ಘೋಷಣೆ ಮಾಡಿದೆ. ಈ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಈ ಘೋಷಣೆ ಮಾಡಿದ ಬಳಿಕ ಜಾಗತಿಕ ವಿರೋಧದ ಮಧ್ಯೆಯೇ ಮತ್ತೊಂದು ದೃಢ ಹೆಜ್ಜೆ ಇಟ್ಟಿದೆ. ಲುಹಾನ್ಸ್ಕ್-ಡೊನೆಟ್ಸ್ಕ್ ಮತ್ತು ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡುವಂತೆ ಪುಟಿನ್ ತನ್ನ ಪಡೆಗಳಿಗೆ ಆದೇಶ ಮಾಡಿದ್ದಾರೆ. ಆದರೆ, ಸೇನೆಯನ್ನು ಯಾವಾಗ ನಿಯೋಜಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

“ನಾವು ಹೆದರುವುದಿಲ್ಲ” – ಉಕ್ರೇನ್ 
ರಷ್ಯಾ ಕೈಗೊಂಡಿರುವ ಕ್ರಮಗಳಿಗೆ ನಾವು ಹೆದರುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ನಾವು ಯಾರಿಂದಲೂ ಏನನ್ನೂ ತೆಗೆದುಕೊಂಡಿಲ್ಲ ಮತ್ತು ಯಾರಿಗೂ ಏನನ್ನೂ ನೀಡುವುದಿಲ್ಲ. ರಷ್ಯಾದ ಬೆದರಿಕೆಗಳ ಹೊರತಾಗಿಯೂ ಉಕ್ರೇನ್‌ನ ಅಂತರರಾಷ್ಟ್ರೀಯ ಗಡಿಗಳು ಮೊದಲಿನಂತೆಯೇ ಇರುತ್ತವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಉಕ್ರೇನ್‌ನ ಎರಡು ಪ್ರಾಂತ್ಯಗಳನ್ನು ಸ್ವತಂತ್ರವೆಂದು ರಷ್ಯಾ ಘೋಷಿಸಿದ ಬಳಿಕ ಯುಎನ್ ಭದ್ರತಾ ಮಂಡಳಿಯು ತುರ್ತು ಸಭೆಯನ್ನು ಕರೆದಿದೆ, ಅದು ಇನ್ನೂ ನಡೆಯುತ್ತಿದೆ.

ಸುದ್ದಿ ಓದಿ