ಅಂತರರಾಷ್ಟ್ರೀಯ

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಹಿಟ್ಲರ್ ಗೆ ಹೋಲಿಸಿದ ಪುಟೀನ್

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಹಿಟ್ಲರ್ ಗೆ ಹೋಲಿಸಿದ ಪುಟೀನ್

ಮಾಸ್ಕೋ: ಮೇ ೦೨: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿಯನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರೊಂದಿಗೆ ಹೋಲಿಸುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಸಚಿವ ಸೆರ್ಗೆಯ್ ಲಾವ್ರೊವ್ ಅವರು, ಝೆಲೆನ್ಸ್ಕಿ ಮತ್ತು ಹಿಟ್ಲರ್ ಇಬ್ಬರೂ ನಾಜಿಗಳು ಮತ್ತು ಅವರಲ್ಲಿ ಯಹೂದಿ ರಕ್ತ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಯಹೂದಿಯ ನಾಜಿಸಂ ಅನ್ನು ನಿರಾಕರಿಸುವುದಿಲ್ಲ. ಅಡಾಲ್ಫ್ ಹಿಟ್ಲರ್ ಕೂಡ ಯಹೂದಿ ರಕ್ತವನ್ನು ಹೊಂದಿದ್ದನು ಎಂದು ವೊಲೊಡಿಮಿರ್ ಹೇಳಿದ್ದರು

ಈ ಹೇಳಿಕೆಗೆ ವಿರೋಧ ವ್ಯಿಕ್ತಪಡಿಸಿದ, ಇಸ್ರೇಲ್ ಈಗ ರಷ್ಯನ್ನರನ್ನು ತಮ್ಮ ದೇಶಕ್ಕೆ ಕರೆಸಿಕೊಂಡು ವಿವರಣೆ ಕೇಳಿದ್ದು, ಇಸ್ರೇಲ್‌ನ ವಿದೇಶಾಂಗ ಸಚಿವ ಯೈರ್ ಲ್ಯಾಪಿಡ್ ರಷ್ಯಾದ ವಿದೇಶಾಂಗ ಸಚಿವರ ಹೇಳಿಕೆಯನ್ನು ಟೀಕಿಸಿದ್ದು, ಕ್ಷಮಿಸಲಾಗದ, ಅತಿರೇಕದ ಮತ್ತು ಐತಿಹಾಸಿಕ ತಪ್ಪು ಎಂದು ಹೇಳಿದ್ದಾರೆ.

ಯಹೂದಿಗಳು ಹತ್ಯಾಕಾಂಡದಲ್ಲಿ ತಮ್ಮನ್ನು ತಾವು ಕೊಂದುಕೊಳ್ಳಲಿಲ್ಲ. ಯಹೂದಿಗಳ ವಿರುದ್ಧದ ಅತ್ಯಂತ ಕೆಳಮಟ್ಟದ ವರ್ಣಭೇದ ನೀತಿಯೆಂದರೆ ಯಹೂದಿಗಳ ವಿರುದ್ಧ ಯೆಹೂದ್ಯರ ವಿರುದ್ಧ ಆರೋಪ ಮಾಡುವುದು ಎಂದು ಟೀಕಿಸಿದ್ದಾರೆ.

ಸುದ್ದಿ ಓದಿ