ಅಂತರರಾಷ್ಟ್ರೀಯ

ಮರಳು,ಮಣ್ಣು ಹಾಕಿ ಇಲ್ಲಿ ಅಡುಗೆ ಮಾಡ್ತಾರೆ

ಮರಳು,ಮಣ್ಣು ಹಾಕಿ ಇಲ್ಲಿ ಅಡುಗೆ ಮಾಡ್ತಾರೆ

ಇರಾನ್:ಜನೆವರಿ 12 ಉಪ್ಪು,ತರಹತರಹದ ಮಸಾಲೆಗಳನ್ನು ಹಾಕಿ‌ ಅಡುಗೆ ಮಾಡೋದು ಸಹಜ.ಅಲ್ಲದೇ ಒಂದೊಂದು ಖಾದ್ಯಕ್ಕೂ ಒಂದೊಂದು ತರಹದ ಮಸಾಲೆಗಳು,ರುಚಿರುಚಿಗೆ ಇನ್ನಷ್ಟು ತರಾವರಿಗಳನ್ನು ಬಳಸೋದು ಸಹಜ.ಆದ್ರೆ ಇಲ್ಲೊಂದು ಕಡೆ ಮಸಾಲೆ ಹಾಕದೇ ಮಣ್ಣು,ಮರಳನ್ನ ಹಾಕಿ ಅಡುಗೆ ಮಾಡ್ತಾರೆ.

ಭಾರತ ದೇಶಆಹಾರಕ್ಕಾಗಿ ಪ್ರಸಿದ್ಧವಾಗಿದೆ.ಭಾರತದ ಪ್ರಸಿದ್ಧ ಭಕ್ಷ್ಯಗಳನ್ನ ಹಲವು ಬಗೆಯ ರುಚಿಕರವಾದ ಖಾದ್ಯಗಳನ್ನ ತಯಾರಿಸಲಾಗುತ್ತೆ. ಆದರೆ ಜನರು ಆಹಾರದಲ್ಲಿ ಮಸಾಲೆ ಅಥವಾ ಉಪ್ಪಿನ ಬದಲು ಮರಳು ಮತ್ತು ಮಣ್ಣನ್ನು ಹಾಕೋ ಸ್ಥಳವೂ ಜಗತ್ತಿನಲ್ಲಿ ಇದೆ.ಇದು ಆಶ್ಚರ್ಯ ಆದ್ರೂ ನಿಜ.

ಇರಾನ್‌ನಲ್ಲಿ ಹಾರ್ಮುಜ್ ಅನ್ನೋ ಹೆಸರಿನ ದ್ವೀಪವಿದೆ. ಇಲ್ಲಿನ ಮಣ್ಣು ಮತ್ತು ಮರಳು ಸಖತ್ ಕಲರ್ ವರ್ಣಮಯವಾಗಿದೆ. ಅಲ್ಲದೇ ಇಲ್ಲಿನ ಪರ್ವತಗಳು ಇಂದ್ರ ಧನುಷ್‌ನಂತೆ ಕಾಣೋದ್ರಿಂದದ ಇದನ್ನು ರೇನ್‌ಬೋ ಐಲ್ಯಾಂಡ್ ಇರಾನ್ ಅಂತಾನೂ ಕರೀತಾರೆ. ಇದನ್ನು ಹೊರತುಪಡಿಸಿ, ಈ ದ್ವೀಪ ಮತ್ತು ಅದರ ಜನರು ಬೇರೆ ಕಾರಣಕ್ಕಾಗಿಯೂ ಪ್ರಸಿದ್ಧರಾಗಿದ್ದಾರೆ. ವಾಸ್ತವವಾಗಿ, ಹಾರ್ಮುಜ್ ದ್ವೀಪದ ಜನರು ತಮ್ಮ ಆಹಾರಕ್ಕೆ ಉಪ್ಪು ಅಥವಾ ಮಸಾಲೆಗಳನ್ನು ಸೇರಿಸುವುದಿಲ್ಲ, ಅವರು ಇಲ್ಲಿ ಮಣ್ಣು ಮತ್ತು ಮರಳನ್ನು ಹಾಕಿ ಅದನ್ನು ಬಹಳ ಪ್ರೀತಿಯಿಂದ ತಿನ್ನುತ್ತಾರೆ.

ಮಣ್ಣು ಮರಳು ಅಡುಗೆಗೆ ಬಳಸೋಕೆ ಕಾರಣವೇನು?

ಜನರು ಮಣ್ಣು ಮತ್ತು ಮರಳನ್ನು ಅಡುಗೆಗೆ ಬಳಸ್ತಾರೆ.ಇದನ್ನ ತಿಂದ್ರೂ ಅವರ ದೇಹಕ್ಕೆ ಯಾವುದೇ ಹಾನಿ ಆಗೋದಿಲ್ಲ. ಇಲ್ಲಿನ ಮಣ್ಣು ಮತ್ತು ಮರಳಿನಲ್ಲಿ ಬಹಳಷ್ಟು ಉಪ್ಪು, ಕಬ್ಬಿಣ ಮತ್ತು ಇತರ ಖನಿಜಾಂಶಯಿದೆ. ಈ ಎಲ್ಲಾ ಖನಿಜಗಳ ರೇನ್ಬೋ ದ್ವೀಪದ ಮರಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಮಣ್ಣು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಜನರು ಮರಳು ಬಳಸುತ್ತಿದ್ದಾರೆ.ಇದನ್ನು ಆಹಾರದಲ್ಲಿ ಹಾಕೋ ಮೊದಲು, ಸಂಪೂರ್ಣವಾಗಿ ಸ್ವಚ್ಛಗೊಳಿಸಿಯೇ ವಿಶೇಷ ಖಾದ್ಯವನ್ನ ತಯಾರಿಸಲಾಗುತ್ತೆ.

ಇಲ್ಲಿರುವ ಅನೇಕ ಭಕ್ಷ್ಯಗಳು ಸಾಕಷ್ಟು ಪ್ರಸಿದ್ಧವಾಗಿವೆ, ಆದರೆ ಮೀನಿನಿಂದ ಮಾಡಿದ ಭಕ್ಷ್ಯವು ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿನ ಸಿಹಿ ನೀರಿನಿಂದ ಮೀನನ್ನು ಹಿಡಿಯಲಾಗುತ್ತದೆ. ಸಾರ್ಡಿನ್, ಕಿಲ್ಕಾ ಮತ್ತು ಮೊಮಾಗ್ ಇಲ್ಲಿನ ಪ್ರಮುಖ ಮೀನುಗಳು. ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ, ಅವುಗಳನ್ನು ಕಿತ್ತಳೆ ಸಿಪ್ಪೆಯೊಂದಿಗೆ ಮ್ಯಾರಿನೇಟ್ ಮಾಡಲಾಗುತ್ತೆ. ನಂತರ ಮರಳು ಮತ್ತು ಜೇಡಿಮಣ್ಣಿನಿಂದ ಮಾಡಿದ ವಿಶೇಷ ಮಸಾಲೆಗಳೊಂದಿಗೆ ಲೇಪಿಸಲಾಗುತ್ತೆ.ನಂತ್ರ ಎರಡು ದಿನಗಳವರೆಗೆ ಸೂರ್ಯನ ಬಿಸಿಲಿಗೆ ಹಾಗೆ ಅವುಗಳನ್ನ ಬಿಡಲಾಗುತ್ತೆ ಅದರ ನಂತರ, ಇಲ್ಲಿ ಅತ್ಯಂತ ಪ್ರಸಿದ್ಧ ಭಕ್ಷ್ಯ ಸಿದ್ಧವಾಗುತ್ತೆ. ಈ ಖಾದ್ಯವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಮಲೆನಾಡಿನ ನೀರಿನಲ್ಲೂ ಉಪ್ಪು ಇರುವುದರಿಂದ ಜನರು ಉಪ್ಪನ್ನು ಪ್ರತ್ಯೇಕವಾಗಿ ಬಳಸೋದಿಲ್ಲ.

ಸುದ್ದಿ ಓದಿ